ವಾಷಿಂಗ್ಟನ್:ಜಗತ್ತಿನ ಕೊರೊನಾ ಪ್ರಕರಣಗಳು ಹಾಗೂ ಮೃತರ ಸಂಖ್ಯೆಯಲ್ಲಿ ಮೊದಲ ಸ್ಥಾನವನ್ನೇ ಕಾಯ್ದಿರಿಸಿಕೊಂಡಿರುವ ಅಮೆರಿಕದಲ್ಲೀಗ ಸೋಂಕಿತರ ಸಂಖ್ಯೆ 30 ಮಿಲಿಯನ್ ಗಡಿ ದಾಟಿದೆ.
2020ರ ನವೆಂಬರ್ನಲ್ಲಿ ಅಮೆರಿಕದ ಕೋವಿಡ್ ಕೇಸ್ಗಳ ಸಂಖ್ಯೆ 10 ಮಿಲಿಯನ್ ಹಾಗೂ 2021ರ ಜನವರಿಯಲ್ಲಿ 20 ಮಿಲಿಯನ್ ಗಡಿ ತಲುಪಿತ್ತು. ಈಗ ಸೋಂಕಿತರ ಸಂಖ್ಯೆ 30,009,386 ಹಾಗೂ ಸಾವಿನ ಸಂಖ್ಯೆ 5,45,237ಕ್ಕೆ ಏರಿಕೆಯಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಮಾಹಿತಿ ನೀಡಿದೆ.