ವಾಷಿಂಗ್ಟನ್ (ಅಮೆರಿಕ): 2008ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ಪ್ರಮುಖ ಆರೋಪಿ, ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹವ್ವೂರ್ ರಾಣಾ ಜಾಮೀನು ಅರ್ಜಿಯನ್ನು ಅಮೆರಿಕದ ನ್ಯಾಯಾಲಯ ವಜಾಗೊಳಿಸಿದೆ.
ಭಾರತ ಸರ್ಕಾರವು ತಹವ್ವೂರ್ ರಾಣಾನನ್ನು ದೇಶ ಭ್ರಷ್ಟ ಎಂದು ಘೋಷಿಸಿದ್ದು, ಅವನನ್ನು ಹಸ್ತಾಂತರ ಮಾಡಬೇಕೆಂದು ಕೆಲವು ವರ್ಷಗಳಿಂದ ಅಮೆರಿಕಕ್ಕೆ ಮನವಿ ಮಾಡಿತ್ತು. ಮತ್ತೊಂದೆಡೆ ತಹವ್ವೂರ್ ರಾಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದನು.
ಜಾಮೀನು ಅರ್ಜಿಯಲ್ಲಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಉಲ್ಲೇಖಿಸಲಾಗಿದ್ದು, ಅಮೆರಿಕದ ಜೈಲಿನಲ್ಲಿದ್ದಾಗಲೇ ಎರಡು ಬಾರಿ ಹೃದಯಾಘಾತವಾಗಿತ್ತು ಎಂದು ಹೇಳಲಾಗಿದೆ. ಇದರ ಜೊತೆಗೆ ತಾನು ಅಮೆರಿಕ ಸರ್ಕಾರದ ವಿರುದ್ಧ ಯಾವುದೇ ಕೃತ್ಯಗಳನ್ನು ಎಸಗಲಿಲ್ಲ. ಇದರಿಂದ ಜಾಮೀನು ನೀಡಬೇಕೆಂದು ತಹವ್ವೂರ್ ರಾಣಾ ಮನವಿ ಮಾಡಿಕೊಂಡಿದ್ದನು. ಆದರೆ ಅಮೆರಿಕದ ಲಾಸ್ ಏಂಜಲೀಸ್ ಜಿಲ್ಲಾ ನ್ಯಾಯಾಲಯ ತಹವ್ವೂರ್ ರಾಣಾಗೆ ಜಾಮೀನು ನೀಡಲು ನಿರಾಕರಿಸಿದೆ.