ಮಿನ್ನಿಯಾಪೊಲೀಸ್ (ಅಮೆರಿಕ):ಇಡೀ ಜಗತ್ತೇ ಆಕ್ರೋಶಗೊಳ್ಳುವಂತೆ ಮಾಡಿದ್ದ ಕಪ್ಪುವರ್ಣೀಯ ಜಾರ್ಜ್ ಫ್ಲಾಯ್ಡ್ ಹಿಂಸಾತ್ಮಕ ಸಾವು ಎಂದಿಗೂ ಮರೆಯಲು ಅಸಾಧ್ಯ. ಇದೀಗ ಫ್ಲಾಯ್ಡ್ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಮಿನ್ನಿಯಾಪೊಲೀಸ್ ಆಡಳಿತ ಘೋಷಿಸಿದೆ.
2020ರ ಮೇ ತಿಂಗಳಲ್ಲಿ ಅಮೆರಿಕದ ಮಿನ್ನಿಯಾಪೊಲೀಸ್ ನಗರದ ಅಧಿಕಾರಿ ನೀಡಿದ ಹಿಂಸೆಯಿಂದಾಗಿ ಆಫ್ರಿಕನ್-ಅಮೆರಿಕನ್ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಮೃತಪಟ್ಟಿದ್ದನು. ಫ್ಲಾಯ್ಡ್ ಕುತ್ತಿಗೆಯ ಮೇಲೆ ಪೊಲೀಸ್ ಅಧಿಕಾರಿ ತನ್ನ ಮೊಣಕಾಲುಗಳನ್ನಿರಿಸಿ ಹಿಂಸೆ ನೀಡಿದ್ದನು. ಉಸಿರಾಡಲು ಕಷ್ಟವಾಗಿ ಫ್ಲಾಯ್ಡ್ ಪ್ರಾಣಬಿಟ್ಟಿದ್ದನು.