ವಾಷಿಂಗ್ಟನ್:ಕೊರೊನಾ ಸಾಂಕ್ರಾಮಿಕದ ಕರಾಳ ರೂಪವನ್ನು ನೋಡಿ, ಅದರಿಂದ ಚೇತರಿಸಿಕೊಂಡು ಸಹಜ ಸ್ಥಿತಿಯತ್ತ ಮರಳುತ್ತಿರುವ ಅಮೆರಿಕವು ಕೋವಿಡ್ ಲಸಿಕೆಯ ಎರಡೂ ಡೋಸ್ಗಳನ್ನು ಪಡೆದವರು ಮಾಸ್ಕ್ ಧರಿಸುವ ಅವಶ್ಯಕತೆಯಿಲ್ಲ ಎಂದು ತನ್ನ ಜನತೆಗೆ ಸೂಚಿಸಿದೆ.
ಹೊಸ ಕೋವಿಡ್ ಮಾರ್ಗಸೂಚಿ ಹೊರಡಿಸಿರುವ ಯುಎಸ್ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ), ಸಂಪೂರ್ಣವಾಗಿ ವ್ಯಾಕ್ಸಿನ್ ಹಾಕಿಸಿಕೊಂಡ ಜನರು ಮಾಸ್ಕ್ ಧರಿಸಬೇಕಿಲ್ಲ. ದೈಹಿಕ ಅಂತರ ಕಾಯ್ದುಕೊಳ್ಳಬೇಕಿಲ್ಲ. ದೇಶದೊಳಗೆ ಪ್ರಯಾಣಿಸುವವರು ಕ್ವಾರಂಟೈನ್ಗೆ ಒಳಪಡುವ ಅಗತ್ಯತೆಯಿಲ್ಲ ಎಂದು ಸಲಹೆ ನೀಡಿದೆ.
ಸಿಡಿಸಿ ಮಾರ್ಗಸೂಚಿಯನ್ನು ಶ್ಲಾಘಿಸಿರುವ ಯುಸ್ ಅಧ್ಯಕ್ಷ ಜೋ ಬೈಡನ್, "ಕೋವಿಡ್ ವಿರುದ್ಧದ ಹೋರಾಟದಲ್ಲಿ ಇಂದು ಅಮೆರಿಕಕ್ಕೆ ಒಳ್ಳೆಯ ದಿನ. ಲಸಿಕೆ ಪಡೆಯಿರಿ ಅಥವಾ ವ್ಯಾಕ್ಸಿನ್ ಹಾಕಿಸಿಕೊಳ್ಳುವವರೆಗೂ ಮಾಸ್ಕ್ ಧರಿಸಿ" ಎಂದು ಹೇಳಿದ್ದಾರೆ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಗೂ ಬೈಡನ್ ಇಬ್ಬರೂ ಮಾಸ್ಕ್ ಧರಿಸದೇ ಶ್ವೇತಭವನದ ಎದುರು ಮಾಧ್ಯಮಗಳ ಮುಂದೆ ಬಂದಿದ್ದಾರೆ.