ಕರ್ನಾಟಕ

karnataka

By

Published : Apr 17, 2020, 2:42 PM IST

ETV Bharat / international

ಅಗತ್ಯ ಪ್ರಯಾಣಕ್ಕಾಗಿ ಮಾತ್ರ ಅಮೆರಿಕ- ಕೆನಡಾ ಗಡಿ ಓಪನ್

ಕೊರೊನಾ ಹಿನ್ನೆಲೆ ಅಗತ್ಯ ಪ್ರಯಾಣಕ್ಕಾಗಿ ಮಾತ್ರ ಗಡಿ ತೆರೆಯಲು ಅಮೆರಿಕ- ಕೆನಡಾ ಕಳೆದ ತಿಂಗಳು ಒಪ್ಪಂದ ಮಾಡಿಕೊಂಡಿದ್ದವು. ಆದರೆ ಆ ಒಪ್ಪಂದವು ಏಪ್ರಿಲ್ 19ಕ್ಕೆ ಮುಕ್ತಾಯಗೊಳ್ಳಲಿದೆ.

canada
canada

ಒಟ್ಟಾವಾ (ಕೆನಡಾ): ಕೆನಡಾ ಮತ್ತು ಅಮೆರಿಕ ನಡುವಿನ ಗಡಿಯನ್ನು ಅನಗತ್ಯ ಪ್ರಯಾಣಕ್ಕಾಗಿ ತೆರೆಯುವುದಿಲ್ಲ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ.

ಕೊರೊನಾ ಹಿನ್ನೆಲೆ ಅಗತ್ಯ ಪ್ರಯಾಣಕ್ಕಾಗಿ ಮಾತ್ರ ಗಡಿ ತೆರೆಯಲು ಅಮೆರಿಕ ಮತ್ತು ಕೆನಡಾ ಕಳೆದ ತಿಂಗಳು ಒಪ್ಪಂದ ಮಾಡಿಕೊಂಡಿದ್ದವು. ಆದರೆ ಆ ಒಪ್ಪಂದ ಏಪ್ರಿಲ್ 19ಕ್ಕೆ ಮುಕ್ತಾಯಗೊಳ್ಳಲಿದೆ.

ಕೊರೊನಾ ಮಧ್ಯೆಯೂ ಅಮೆರಿಕ ಮತ್ತು ಕೆನಡಾ ಸಂಬಂಧ ಉತ್ತಮವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಸಾಮಾನ್ಯ ದಿನಗಳಲ್ಲಿ ನಿತ್ಯ ಸುಮಾರು 2,00,000 ಜನರು ಕೆನಡಾ -ಅಮೆರಿಕ ಗಡಿಯನ್ನು ದಾಟುತ್ತಾರೆ. ಕೆನಡಾ ತನ್ನ ರಫ್ತಿನ ಶೇಕಡಾ 75ರಷ್ಟನ್ನು ಅಮೆರಿಕಕ್ಕೆ ಕಳುಹಿಸುತ್ತದೆ ಮತ್ತು ಸುಮಾರು ಶೇಕಡಾ 18ರಷ್ಟು ಅಮೆರಿಕದಿಂದ ಕೆನಡಾಗೆ ರಫ್ತಾಗುತ್ತದೆ.

ABOUT THE AUTHOR

...view details