ವಾಷಿಂಗ್ಟನ್ : ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುತ್ತಿರುವ ವಿಶ್ವದ ದೊಡ್ಡಣ್ಣ ಅಮೆರಿಕ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಜೋ ಬೈಡನ್ ಸರ್ಕಾರ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲು ವಾಹನಗಳ ಮೈಲೇಜ್ ಮಾನದಂಡಗಳನ್ನು ಹೆಚ್ಚಿಸುವ ಮಸೂದೆ ಜಾರಿಗೆ ಮುಂದಾಗಿದೆ.
ನಿನ್ನೆ ಹೊರಡಿಸಲಾದ ಅಂತಿಮ ನಿಯಮವು 2023ರ ಮಾದರಿ ವರ್ಷದಿಂದ ಜಾರಿಗೆ ಬರುವಂತೆ ವಾಹನಗಳ ಮೈಲೇಜ್ ಮಾನದಂಡಗಳನ್ನು ಹೆಚ್ಚಿಸುತ್ತಿದೆ. 2026ರ ವೇಳೆಗೆ ಪ್ರತಿ ಗ್ಯಾಲನ್‌ಗೆ 40 ಮೈಲುಗಳ ಯೋಜಿತ ಉದ್ಯಮ-ವ್ಯಾಪಕ ಗುರಿಯನ್ನು ತಲುಪುತ್ತದೆ. ಕಳೆದ ವರ್ಷ ಟ್ರಂಪ್ ಆಡಳಿತವು ಅಂತಿಮಗೊಳಿಸಿದ ನಿಯಮಕ್ಕಿಂತ 25 ಪ್ರತಿಶತ ಹೆಚ್ಚು ಹಾಗೂ ಆಗಸ್ಟ್‌ನಲ್ಲಿ ಪರಿಸರ ಸಂರಕ್ಷಣಾ ಏಜೆನ್ಸಿಯ ಪ್ರಸ್ತಾಪಕ್ಕಿಂತ ಶೇ.5ಕ್ಕಿಂತ ಇದು ಹೆಚ್ಚಾಗಿದೆ.
ನಾವು ದೃಢ ಹಾಗೂ ಕಠಿಣ ಮಾನದಂಡಗಳನ್ನು ತರುತ್ತಿದ್ದೇವೆ. ಇದು ಜನರು ಮತ್ತು ಭೂಮಿಗೆ ಹಾನಿ ಮಾಡುವ ಮಾಲಿನ್ಯವನ್ನು ಆಕ್ರಮಣಕಾರಿಯಾಗಿ ಕಡಿಮೆ ಮಾಡುತ್ತದೆ. ಇದರ ಜೊತೆಗೆ ಈ ನಿರ್ಧಾರದಿಂದ ಕುಟುಂಬಗಳ ಹಣವನ್ನೂ ಉಳಿಸುತ್ತದೆ ಎಂದು ಇಪಿಎ ನಿರ್ವಾಹಕ ಮೈಕೆಲ್ ರೇಗನ್ ಹೇಳಿದ್ದಾರೆ.