ಕರ್ನಾಟಕ

karnataka

ETV Bharat / international

ಚೀನಾ ಮಿಲಿಟರಿಯ ನಿಯಂತ್ರಣದಲ್ಲಿರುವ ಕೆಲ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಿದ ಅಮೆರಿಕ - ಶಿಯೋಮಿಯನ್ನು ಕಪ್ಪು ಪಟ್ಟಿಗೆ ಸೇರಿಸಿದ ಯುಎಸ್ ರಕ್ಷಣಾ ಇಲಾಖೆ

ಶಿಯೋಮಿ ಸೇರಿದಂತೆ ಇನ್ನೂ ಒಂಬತ್ತು ಚೀನೀ ಕಂಪನಿಗಳನ್ನು ಯುಎಸ್ ರಕ್ಷಣಾ ಇಲಾಖೆ ಕಪ್ಪುಪಟ್ಟಿಗೆ ಸೇರಿಸಿದೆ. 2020ರ ಜೂನ್‌ನಲ್ಲೇ ಬಿಡುಗಡೆಯಾದ ಈ ಪಟ್ಟಿಯನ್ನು ಡಿಸೆಂಬರ್ 2020ರಲ್ಲಿ ನವೀಕರಿಸಲಾಗಿದೆ.

US
US

By

Published : Jan 15, 2021, 8:27 AM IST

ವಾಷಿಂಗ್ಟನ್ (ಯುಎಸ್): ಚೀನಾದ ಮಿಲಿಟರಿಯ ಒಡೆತನದಲ್ಲಿದೆ ಅಥವಾ ನಿಯಂತ್ರಿಸಲ್ಪಟ್ಟಿದೆ ಎಂದು ಆರೋಪಿಸಿ ಫೋನ್ ತಯಾರಿಕಾ ಕಂಪನಿ ಶಿಯೋಮಿ ಸೇರಿದಂತೆ ಇನ್ನೂ ಒಂಬತ್ತು ಚೀನೀ ಕಂಪನಿಗಳನ್ನು ಯುಎಸ್ ರಕ್ಷಣಾ ಇಲಾಖೆ ಕಪ್ಪುಪಟ್ಟಿಗೆ ಸೇರಿಸಿದೆ.

2020ರ ಜೂನ್‌ನಲ್ಲೇ ಇಲಾಖೆಯು ಆರಂಭಿಕ ನಾಗರಿಕ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತ ಮಿಲಿಟರಿ ಸಂಬಂಧಗಳನ್ನು ಹೊಂದಿರುವ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಬಳಿಕ ಡಿಸೆಂಬರ್ 2020ರಲ್ಲಿ ಹೆಚ್ಚಿನ ಕಂಪನಿಗಳನ್ನು ಈ ಪಟ್ಟಿಗೆ ಸೇರಿಸಿತ್ತು.

ನವೀಕರಿಸಿದ ಪಟ್ಟಿಯಲ್ಲಿ ಇದೀಗ 40ಕ್ಕೂ ಹೆಚ್ಚು ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ರಕ್ಷಣಾ ಇಲಾಖೆಯು ಯುನೈಟೆಡ್ ಸ್ಟೇಟ್ಸ್​ನಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚುವರಿ "ಕಮ್ಯುನಿಸ್ಟ್ ಚೀನೀ ಮಿಲಿಟರಿ ಕಂಪನಿಗಳ" ಹೆಸರನ್ನು ಬಿಡುಗಡೆ ಮಾಡಿರುವುದಾಗಿ ಹೇಳಿದೆ.

ABOUT THE AUTHOR

...view details