ವಾಷಿಂಗ್ಟನ್, ಅಮೆರಿಕ :ರಷ್ಯಾದ ವಿರುದ್ಧ ಹೋರಾಡಲು ಉಕ್ರೇನ್ಗೆ ಹೆಚ್ಚುವರಿ ಶಸ್ತ್ರಾಸ್ತ್ರ ಮತ್ತು ಸಲಕರಣೆಗಳಿಗೆ 200 ಮಿಲಿಯನ್ ಅಮೆರಿಕನ್ ಡಾಲರ್ ಅನ್ನು ನೀಡಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅನುಮೋದನೆ ನೀಡಿದ್ದಾರೆ ಎಂದು ಶ್ವೇತಭವನ ಮಾಹಿತಿ ನೀಡಿದೆ.
ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ನಾಲ್ಕನೇ ಬಾರಿಗೆ ಅಮೆರಿಕ ಉಕ್ರೇನ್ಗೆ ಸಹಕಾರ ನೀಡುತ್ತಿದ್ದು, ಜನವರಿ 2021ರಿಂದ ಈವರೆಗೆ 1.2 ಬಿಲಿಯನ್ ಅಮೆರಿಕನ್ ಡಾಲರ್ ಅನ್ನು ಭದ್ರತಾ ಸಹಾಯವನ್ನಾಗಿ ನೀಡಲಾಗಿದೆ ಎಂದು ಶ್ವೇತಭವನ ಟ್ವೀಟ್ನಲ್ಲಿ ತಿಳಿಸಿದೆ. ಇದೇ ರೀತಿಯಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಟ್ವೀಟ್ ಮಾಡಿದ್ದಾರೆ
ರಷ್ಯಾದ ಅಪ್ರಚೋದಿತ ದಾಳಿಯನ್ನು ಎದುರಿಸುತ್ತಿರುವ ಉಕ್ರೇನ್‌ನ ಸೈನಿಕರಿಗೆ ರಕ್ಷಾ ಕವಚಗಳು, ವಿಮಾನ ಹೊಡೆದುರಳಿಸಬಲ್ಲ ಸಾಧನಗಳು ಮತ್ತು ಹಲವು ಶಸ್ತ್ರಾಸ್ತ್ರಗಳಿಗಾಗಿ ತಕ್ಷಣದ ನೆರವು ನೀಡಲಾಗುತ್ತಿದೆ ಎಂದು ಅಮೆರಿಕನ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ಸಿಎನ್ಎನ್ ವರದಿ ಮಾಡಿದೆ.