ಕಳೆದ ವರ್ಷದ ಮೇ ತಿಂಗಳ ಎರಡನೇ ವಾರದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬೀಜಿಂಗ್‌ಗೆ ಹೀಗೆ ಎಚ್ಚರಿಕೆ ನೀಡಿದ್ದರು: “ವಾಣಿಜ್ಯ ಒಪ್ಪಂದಗಳಿಗೆ ಚೀನಾ ಈಗ ಸಿದ್ಧವಾಗಲೇಬೇಕು… ಒಂದು ವೇಳೆ ನಾನು ಎರಡನೇ ಅವಧಿಗೆ ಸ್ಪರ್ಧಿಸಿ, ಆಯ್ಕೆಯಾಗಿದ್ದೇ ಆದರೆ ಅದು ಇನ್ನಷ್ಟು ಕಠಿಣವಾಗಲಿದೆ”. ಇದಕ್ಕೆ ಉತ್ತರಿಸಿದ್ದ ಚೀನಾ, ಆಮದು ವಾಣಿಜ್ಯ ವಿಷಯಗಳಿಗೆ ಸಂಬಂಧಿಸಿದಿಂತೆ ಅಮೆರಿಕಕ್ಕೆ ಯಾವುದೇ ವಿನಾಯಿತಿಗಳನ್ನು ನೀಡಲಾರೆ ಎಂದು ಸ್ಪಷ್ಟಪಡಿಸಿತ್ತು. ಜಗತ್ತಿನ ಈ ಎರಡೂ ಪ್ರಮುಖ ಆರ್ಥಿಕ ಶಕ್ತಿಗಳ ನಡುವಿನ ಈ ಬಹಿರಂಗ ತಿಕ್ಕಾಟವು ಜಾಗತಿಕ ಆರ್ಥಿಕ ಹಿಂಜರಿಕೆಯತ್ತ ವಾಲುವಂತೆ ಮಾಡುತ್ತಿದ್ದ ಈ ಸಮಯದಲ್ಲಿ, ವಾಷಿಂಗ್ಟನ್ ಮತ್ತು ಬೀಜಿಂಗ್ ಕೊನೆಗೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿವೆ. ಸಂಕ್ರಾಂತಿ ದಿನದಂದು ಮೊದಲ ಹಂತದ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ, ಜಾಗತಿಕ ಆರ್ಥಿಕ ಹಿಂಜರಿಕೆಯನ್ನು ತಿಳಿಗೊಳಿಸುವ ಪರಿಹಾರವನ್ನು ಮೂಡಿಸುವಲ್ಲಿ ಅಮೆರಿಕ ಮತ್ತು ಚೀನಾ ಕೊನೆಗೂ ಯಶಸ್ವಿಯಾಗಿವೆ.
ಅಧ್ಯಕ್ಷ ಟ್ರಂಪ್ ಮತ್ತು ಚೀನಾದ ಉಪಪ್ರಧಾನಿ ಲೀ ಸಹಿ ಹಾಕಿರುವ 86 ಪುಟಗಳ ಒಪ್ಪಂದದ ಪ್ರಕಾರ, ಮುಂದಿನ ಎರಡು ವರ್ಷಗಳಲ್ಲಿ ಅಮೆರಿಕದಿಂದ $ 20, 0000 ಶತಕಕೋಟಿ ಹೆಚ್ಚುವರಿ ಖರೀದಿಯನ್ನು ಬೀಜಿಂಗ್ ಮಾಡಲಿದೆ. ಆ ಮೂಲಕ, 2018ರಲ್ಲಿ ಅಮೆರಿಕದೊಂದಿಗೆ ಇದ್ದ $ 42,000 ಶತಕೋಟಿ ವಾಣಿಜ್ಯ ಕೊರತೆಯನ್ನು ಕಡಿತಗೊಳಿಸಿದಂತಾಗಿದೆ. ಚೀನಾ ಕಡೆಯಿಂದ ಬರುವ $ 12,000 ಶತಕೋಟಿ ಮೊತ್ತದ ಸರಕುಗಳ ಮೇಲಿನ ತೆರಿಗೆಯನ್ನು ಶೇಕಡಾ 50ರಷ್ಟು ತಗ್ಗಿಸಲು ಅಮೆರಿಕ ಒಪ್ಪಿಗೆ ಸೂಚಿಸಿದೆಯಲ್ಲದೇ ಹೆಚ್ಚುವರಿ ತೆರಿಗೆಗಳನ್ನು ವಿಧಿಸುವ ಪ್ರಸ್ತಾವನೆಗಳನ್ನು ರದ್ದು ಮಾಡಿದೆ. ಎರಡನೇ ಹಂತದಲ್ಲಿ ಬರುವ ಪ್ರಮುಖ ಹಾಗೂ ಮಹತ್ವದ ವಿಷಯಗಳನ್ನು ಒಳಗೊಂಡಿರುವ ಒಪ್ಪಂದಗಳಿಗೆ ಈ ವರ್ಷಾಂತ್ಯಕ್ಕೆ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ನಂತರವೇ ಸಹಿ ಬೀಳಬಹುದು ಎಂಬ ವದಂತಿಗಳು ಹರಡಿವೆ. ಎರಡೂ ಪ್ರಮುಖ ಜಾಗತಿಕ ಶಕ್ತಿಗಳ ನಡುವಿನ ಆರ್ಥಿಕ ಹಾಗೂ ರಾಜಕೀಯ ಅನಿವಾರ್ಯತೆಗಳೇ ಪ್ರಸಕ್ತ ಒಪ್ಪಂದಕ್ಕೆ ಕಾರಣವಾಗಿವೆ ಎಂಬುದನ್ನು ಇದು ಸೂಚಿಸುತ್ತದೆ. ಆ ಮಟ್ಟಿಗೆ ಅಭಿವೃದ್ಧಿಶೀಲ ದೇಶಗಳ ಸಂಕಷ್ಟಕರ ಆರ್ಥಿಕತೆಗೆ ಈ ಒಪ್ಪಂದ ನೆಮ್ಮದಿ ತಂದಂತಾಗಿದೆ.
ಸೋವಿಯತ್ ಒಕ್ಕೂಟದೊಂದಿಗೆ ಇದ್ದ ಶೀತಲ ಸಮರದ ಹಿನ್ನೆಲೆಯಲ್ಲಿ ಅಮೆರಿಕದ ಅಧಿಕಾರಶಾಹಿ ೧೯೯೨ರಲ್ಲಿ ರೂಪಿಸಿದ್ದ ಭದ್ರತಾ ನೀತಿ ಮಾರ್ಗದರ್ಶಿ ಚೌಕಟ್ಟುʼಅಭೇದ್ಯ ಅಮೆರಿಕʼಪರಿಕಲ್ಪನೆಯನ್ನು ಬಿಂಬಿಸಿತ್ತು. 1978ರಲ್ಲಿ ಆರ್ಥಿಕ ಸುಧಾರಣೆಗಳಿಗೆ ಚೀನಾ ಒತ್ತು ಕೊಟ್ಟಾಗ, ಅಮೆರಿಕದ ನಾಯಕರು ಹಾಗೂ ಬಹುರಾಷ್ಟ್ರೀಯ ಕಂಪನಿಗಳು ಈ ಬೃಹತ್ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಿದ್ದರು. ಅದರ ಫಲವಾಗಿ ಚೀನಾ ಗಣರಾಜ್ಯವು ಜಾಗತಿಕ ಉತ್ಪಾದನಾ ಕೇಂದ್ರವಾಗಿ ರೂಪಾಂತರ ಹೊಂದಿತು. ೧೯೯೦ರಲ್ಲಿ ಜಾಗತಿಕ ಉತ್ಪಾದನೆಯ ಶೇಕಡಾ ೩ರಷ್ಟು ಪಾಲನ್ನು ಮಾತ್ರ ಹೊಂದಿದ್ದ ಚೀನಾ ಇವತ್ತು ಜಗತ್ತಿನ ಒಟ್ಟು ಉತ್ಪಾದನೆಯ ಕಾಲು ಭಾಗವನ್ನು ಹೊಂದುವ ಮೂಲಕ ಜಗತ್ತಿನ ಸರ್ವಶಕ್ತ ದೇಶಕ್ಕೆ ಸ್ಪರ್ಧಿಯಾಗುವ ಮಟ್ಟಿಗೆ ಸೆಡ್ಡು ಹೊಡೆದು ಬೆಳೆದಿದೆ. 1945ರಲ್ಲಿ ಅಮೆರಿಕದೊಂದಿಗಿನ ವ್ಯಾಪಾರದಲ್ಲಿ $ 60 ಕೋಟಿ ವಾಣಿಜ್ಯ ಹೆಚ್ಚುವರಿ ಸಾಧಿಸಿದ್ದ ಚೀನಾ, 2018ರ ವೇಳೆಗೆ $ 420 ಶತಕೋಟಿ ವಾಣಿಜ್ಯ ಹೆಚ್ಚಳವನ್ನು ಸಾಧಿಸಿತು!
ಚೀನಾದ ಈ ಅಗಾಧ ವಾಣಿಜ್ಯ ಅಂತರದಿಂದ ಬೆಚ್ಚಿಬಿದ್ದಿದ್ದ ಅಧ್ಯಕ್ಷ ಟ್ರಂಪ್,ʼಇತಿಹಾಸದಲ್ಲಿ ಕಂಡು ಕೇಳರಿಯದ ಲೂಟಿʼಎಂದು 2016ರಲ್ಲಿ ಟೀಕಿಸಿದ್ದಲ್ಲದೇ, ಇದಕ್ಕೆ ಪರಿಹಾರ ಕಂಡುಕೊಳ್ಳಲು ಚೀನಾ ಅಧ್ಯಕ್ಷರಿಗೆ 100 ದಿನಗಳ ಗಡುವು ವಿಧಿಸಿದ್ದರು. ಆದರೆ, ಯಾವುದೇ ಧನಾತ್ಮಕ ಕ್ರಮಗಳು ಕಂಡು ಬರದ್ದರಿಂದ, ಚೀನಾ ಆಮದಿನ ಮೇಲೆ ಅಮೆರಿಕ ಭಾರೀ ತೆರಿಗೆಗಳನ್ನು ಹೇರಿತು. ಇದಕ್ಕೆ ಪ್ರತಿಯಾಗಿ ಚೀನಾ ಸಹ ಅಮೆರಿಕದ ಆಮದನ್ನು ನಿರ್ಬಂಧಿಸುವ ಮೂಲಕ ಪ್ರತ್ಯುತ್ತರ ನೀಡಿತು. ಚೀನಾದ ಈ ಕ್ರಮದಿಂದಾಗಿ ಅಮೆರಿಕದ ಕೃಷಿ ಕ್ಷೇತ್ರದಲ್ಲಿ ಸಂಕಷ್ಟ ತಲೆದೋರಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು.