ವಾಷಿಂಗ್ಟನ್: ಭಾರತದೊಂದಿಗೆ ಭದ್ರತಾ ವ್ಯವಹಾರ ಸಂಬಂಧವನ್ನು ವೃದ್ಧಿಸಲು ಅಮೆರಿಕ ಅಸ್ತು ಎಂದಿದೆ. ಜತೆಗೆ ಇಂಡೋ-ಫೆಸಿಫಿಕ್ ಪ್ರಾಂತ್ಯದ ಗಡಿ ರಕ್ಷಣಾ ಸಹಭಾಗಿತ್ವದತ್ತಲೂ ಹೆಚ್ಚು ಗಮನ ಹರಿಸಿದೆ.
ಅಮೆರಿಕದ ಪೊಲಿಟಿಕಲ್-ಮಿಲಿಟರಿ ಬ್ಯುರೋ ತಿಳಿಸಿರುವಂತೆ, ಇಂಡೋ-ಫೆಸಿಫಿಕ್ ಪ್ರಾಂತ್ಯವನ್ನು ಮುಕ್ತಗೊಳಿಸುವ ಅಮೆರಿಕದ ಉದ್ದೇಶದಲ್ಲಿ ಭಾರತ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಹಾಗಾಗಿ ಭದ್ರತಾ ವ್ಯವಹಾರ ಸಂಬಂಧವನ್ನು ಹಾಗೂ ಗಡಿ ಭದ್ರತಾ ಸಹಭಾಗಿತ್ವವನ್ನು ವೃದ್ಧಿಸಲು ಎರಡೂ ರಾಷ್ಟ್ರಗಳು ಕೂಡಿ ಕೆಲಸ ಮಾಡುತ್ತೇವೆ ಎಂದು ಹೇಳಿದೆ.
ಈ ವರ್ಷ 15 ಬಿಲಿಯನ್ ಮೊತ್ತದ ಭದ್ರತಾ ವ್ಯವಹಾರ ವೃದ್ಧಿಸಲು ನಮ್ಮ ಬ್ಯೂರೋ ಸಂಪೂರ್ಣ ಸಹಕಾರ ನೀಡುತ್ತದೆ. ಅಲ್ಲದೆ, ಫಾರಿನ್ ಮಿಲಿಟರಿ ಸೇಲ್ ಹಾಗೂ ಡೈರೆಕ್ಟ್ ಕಮರ್ಷಿಯಲ್ ಸೇಲ್ಸ್ಗೂ ಬದ್ಧವಾಗಿದೆ. ಇದರಿಂದ ಸಾಕಷ್ಟು ಉದ್ಯೋಗ ಸೃಷ್ಟಿಯಾಗಲಿದ್ದು, ಭದ್ರತಾ ದೃಷ್ಟಿಯಿಂದಲೂ ಎರಡೂ ದೇಶಗಳಿಗೆ ಆರೋಗ್ಯಕರವಾಗಿದೆ ಎಂದಿದೆ.
2.6 ಬಿಲಿಯನ್ ಮೊತ್ತದ MH-60R Seahawk helicopters, 2.3 ಬಿಲಿಯನ್ ಮೊತ್ತದ Apache helicopters, 3 ಬಿಲಿಯನ್ ಮೊತ್ತದ P-8I maritime patrol aircraft ಹಾಗೂ 737 ಮಿಲಿಯನ್ ಮೊತ್ತದ M777 howitzers ಭದ್ರತಾ ಒಪ್ಪಂದಗಳ ಬಗ್ಗೆ ಅಮೆರಿಕ ಉಲ್ಲೇಖಿಸಿದೆ.