ಪೋರ್ಟ್ಲ್ಯಾಂಡ್ :ಅಮೆರಿಕದ ಒರೆಗಾನ್ ರಾಜ್ಯದ ಪೋರ್ಟ್ಲ್ಯಾಂಡ್ನಲ್ಲಿ ಶನಿವಾರ ನಡೆದ ನಾಲ್ಕು ಪ್ರತ್ಯೇಕ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ. ನಗರದಲ್ಲಿ ಕಳೆದ ಆರು ತಿಂಗಳಲ್ಲಿ ಗುಂಡಿನ ದಾಳಿ ಸಂಬಂಧಿತ ಹಿಂಸಾಚಾರಗಳು ಹೆಚ್ಚಳವಾಗಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೋರ್ಟ್ಲ್ಯಾಂಡ್ ಮೇಯರ್ ಟೆಡ್ ವೀಲ್ಹರ್, ಗುಂಡಿನ ದಾಳಿ ನಗರದಲ್ಲಿ ಒಂದು 'ಪಿಡುಗು' ತರ ಆಗಿದೆ. ಕಳೆದ ಒಂದು ವರ್ಷದಲ್ಲಿ ಸುಮಾರು 125 ಪೊಲೀಸ್ ಅಧಿಕಾರಿಗಳು ಗುಂಡಿನ ದಾಳಿಯಿಂದ ಹತರಾಗಿದ್ದಾರೆ ಎಂದು ಹೇಳಿದ್ದಾರೆ.
ಯುಎಸ್ನ ಮಿನ್ನೆಸೋಟ ರಾಜ್ಯದ ಮಿನ್ನಿಯಾಪೊಲೀಸ್ನಲ್ಲಿ ಜಾರ್ಜ್ ಫ್ಲಾಯ್ಡ್ ಹತ್ಯೆ ಬಳಿಕ ತಿಂಗಳುಗಟ್ಟೆಲೆ ನಡೆದ ಪ್ರತಿಭಟನೆಗಳು ನಗರವನ್ನು ಕಂಗೆಡಿಸಿತ್ತು. ಅಲ್ಲದೆ ಪೊಲೀಸರ ವಿರುದ್ಧ ಹಿಂಸಾಚಾರಗಳು ನಡೆದಿದ್ದವು.