ಕರ್ನಾಟಕ

karnataka

ETV Bharat / international

ನೀವೆಲ್ಲಾದರೂ ತಲೆಕೆಳಗಾದ ಮನೆ ಕಂಡಿದ್ದೀರಾ? ಇಲ್ಲಿದೆ ನೋಡಿ.. - ತಲೆಕೆಳಗಾದ ಮನೆ

Reverse house in Colombia: ಕೊಲಂಬಿಯಾದ ಈ ಮನೆಯು ಪ್ರವಾಸಿಗರನ್ನು ಆಕರ್ಷಣೀಯ ತಾಣವಾಗಿ ಮಾರ್ಪಟ್ಟಿದೆ. ವಿಶಿಷ್ಟ ಮನೆಯನ್ನು ನೋಡಲು ನಿತ್ಯ ಜನರು ಆಗಮಿಸುತ್ತಿದ್ದು, ಅಲ್ಲಿನ ವಿಶೇಷ ಅನುಭವಕ್ಕೆ ಫಿದಾ ಆಗಿದ್ದಾರೆ.

Upside-down house in Colombia become attraction of visitors
ತಲೆಕೆಳಗಾದ ಮನೆ

By

Published : Jan 28, 2022, 6:09 AM IST

Updated : Jan 28, 2022, 11:24 AM IST

ಕೊಲಂಬಿಯಾ:ಕೊಲಂಬಿಯಾದ ಗ್ವಾಟೆವಿಟಾ ಎಂಬಲ್ಲಿನ ಮನೆಯೊಂದು ಪ್ರವಾಸಿಗರ ಆಕರ್ಷಣೆಯಾಗಿ ಮಾರ್ಪಟ್ಟಿದೆ. ದೇಶ-ವಿದೇಶಗಳಿಂದ ಪ್ರವಾಸಿಗರು ಈ ಮನೆಗೆ ಭೇಟಿ ನೀಡುತ್ತಿದ್ದಾರೆ. ಹಾಗಾದ್ರೆ ಈ ಆಕರ್ಷಕ ಮನೆಯ ವೈಶಿಷ್ಟ್ಯತೆ ಏನಂದ್ರೆ ಅದನ್ನು ಸಂಪೂರ್ಣವಾಗಿ ತಲೆಕೆಳಗಾಗಿರುವ ಮಾದರಿಯಲ್ಲಿ ನಿರ್ಮಿಸಲಾಗಿದೆ.

ತಲೆಕೆಳಗಾದ ಮನೆ

ಹೌದು, ಕೊಲಂಬಿಯಾದಲ್ಲಿ ಫ್ರಿಟ್ಜ್ ಸ್ಕಾಲ್ ಎಂಬಾತ ಈ ಮನೆಯನ್ನು ವಿನ್ಯಾಸಗೊಳಿಸಿದ್ದಾರೆ. ಫ್ರಿಟ್ಜ್ ಮೂಲತಃ ಆಸ್ಟ್ರಿಯಾದವನಾಗಿದ್ದು, ಕೊಲಂಬಿಯಾದಲ್ಲಿ ನೆಲೆಸಿದ್ದಾನೆ. 2015ರಲ್ಲಿ ಫ್ರಿಟ್ಜ್ ತನ್ನ ಮೊಮ್ಮಕ್ಕಳೊಂದಿಗೆ ಆಸ್ಟ್ರಿಯಾದ ತನ್ನ ತವರು ಮನೆಗೆ ತೆರಳಿದ್ದ. ಆ ಸಂರ್ಭದಲ್ಲಿ ಆತ ತಲೆಕೆಳಗಾಗಿ ನಿರ್ಮಿತವಾಗಿದ್ದ ಮನೆಯೊಂದನ್ನು ನೋಡಿದ್ದ. ಬಳಿಕ ಅದರಂತೆಯೇ ತಾನೂ ಕೂಡ ಮನೆ ವಿನ್ಯಾಸಗೊಳಿಸಿದ್ದು, ಕೋವಿಡ್​​ ಸಂಕಷ್ಟದಿಂದಾಗಿ ವರ್ಷದ ಆರಂಭದಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಮನೆ ಬಗ್ಗೆ ಮಾತನಾಡಿರುವ ಫ್ರಿಟ್ಜ್ ಸ್ಕಾಲ್ 'ಆರಂಭದಲ್ಲಿ ಎಲ್ಲರೂ ನನ್ನನ್ನು ಹುಚ್ಚನಂತೆ ಕಾಣುತ್ತಿದ್ದರು, ನನ್ನ ಮಾತನ್ನು ಯಾರೂ ನಂಬಲಿಲ್ಲ. ನಾನು ತಲೆಕೆಳಗಾದ ಮನೆ ನಿರ್ಮಿಸುತ್ತೇನೆ ಎಂದಾಗ ಕೆಲವರು ಮಾಡಿ ತೋರಿಸುವಂತೆ ಹೇಳಿದ್ದರು' ಎಂದಿದ್ದಾರೆ.

ಕಳೆದ ಮೂರು ವಾರಗಳ ಹಿಂದೆ ಮನೆಯು ಅನಾವರಣಗೊಂಡಿದ್ದು, ಅಂದಿನಿಂದ ಮನೆಯನ್ನು ನೋಡಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಈ ಮನೆ ವಿಶೇಷ ಅನುಭವ ನೀಡುತ್ತಿದೆ ಎನ್ನುತ್ತಾರೆ ಪ್ರವಾಸಿಗರು.

ಇದನ್ನೂ ಓದಿ:ಬಲೂಚಿಸ್ತಾನದಲ್ಲಿ ಭಯೋತ್ಪಾದಕರ ಅಟ್ಟಹಾಸ: 10 ಮಂದಿ ಪಾಕಿಸ್ತಾನಿ ಸೈನಿಕರು ಸಾವು

Last Updated : Jan 28, 2022, 11:24 AM IST

ABOUT THE AUTHOR

...view details