ವಾಷಿಂಗ್ಟನ್: ವಿಶ್ವದ ಹಲವು ದೇಶಗಳಲ್ಲಿ ಹರಡುತ್ತಿರುವ ಮಾರಣಾಂತಿಕ ಕೊರೊನಾ ಸೋಂಕಿಗೆ ಜನತೆ ಭಯಭೀತರಾಗಿದ್ದು, ಅಮೆರಿಕದಲ್ಲೂ ಮೊದಲ ಬಲಿಯಾಗಿದೆ. ವಾಷಿಂಗ್ಟನ್ನಲ್ಲಿ ಸೋಂಕಿನಿಂದ ಮಹಿಳೆಯೋರ್ವಳು ಸಾವನ್ನಪ್ಪಿದ್ದಾಳೆ.
ಅಮೆರಿಕದಲ್ಲಿ ಕೊರೊನಾ ವೈರಸ್ಗೆ ಮೊದಲ ಬಲಿ - ಕೊರೊನಾ ವೈರಸ್ ಸೋಂಕು
ವಿಶ್ವದ ಹಲವು ದೇಶಗಳಲ್ಲಿ ಹರಡುತ್ತಿರುವ ಮಾರಣಾಂತಿಕ ಕೊರೊನಾ ಸೋಂಕಿನಿಂದ ಅಮೆರಿಕದಲ್ಲೂ ಮೊದಲ ಸಾವು ಸಂಭವಿಸಿದೆ.
ಕಿಂಗ್ ಕೌಂಟಿಯಲ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವ ಪ್ರಕರಣಗಳು ಪತ್ತೆಯಾಗಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಮಹಿಳೆ ಸಾವನ್ನಪ್ಪಿರುವುದನ್ನ ದೃಢಪಡಿಸಿದ್ದಾರೆ. ಈಗಾಗಲೇ ಅಮೆರಿಕದಲ್ಲಿ 22 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲು ನಾವು ಸಿದ್ಧರಿದ್ದೇವೆ. ವೈರಸ್ ವಿರುದ್ಧ ಲಸಿಕೆ ಕಂಡುಹಿಡಿಯಲು ಔಷಧಿ ತಯಾರಿಕಾ ಕಂಪನಿಯೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.
ಈಗಾಗಲೇ ಕೊರೊನಾ ವೈರಸ್ ಪ್ರಕರಣಗಳು ಅಮೆರಿಕ, ಸಿಂಗಾಪುರ್, ಇಟಲಿ, ಫ್ರಾನ್ಸ್, ರಷ್ಯಾ, ಸ್ಪೇನ್ ಮತ್ತು ಭಾರತ ಸೇರಿದಂತೆ 45ಕ್ಕೂ ಹೆಚ್ಚು ದೇಶಗಳಲ್ಲಿ ಕಂಡುಬಂದಿವೆ. ಈ ಮಹಾಮಾರಿಗೆ ಚೀನಾದಲ್ಲಿ ಇಲ್ಲಿಯವರೆಗೆ 2,835ಕ್ಕೂ ಅಧಿಕ ಜನರು ಸಾವನ್ನಪ್ಪಿರುವ ವರದಿಯಾಗಿದೆಎಂದು ತಿಳಿದು ಬಂದಿದೆ.