ನ್ಯೂಯಾರ್ಕ್: ಕೋವಿಡ್ ಲಸಿಕೆಗಾಗಿ ಇಡೀ ಜಗತ್ತೇ ಕಾತರದಿಂದ ಕಾಯುತ್ತಿದೆ. ವರ್ಷಾಂತ್ಯದ ವೇಳೆಗೆ ವ್ಯಾಕ್ಸಿನ್ ಮಾರುಕಟ್ಟೆಗೆ ಬರುವ ವಿಶ್ವಾಸವನ್ನ ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಯುನಿಸೆಫ್, 100 ಕೋಟಿ ಸಿರಿಂಜ್ ದಾಸ್ತಾನು ಮಾಡಲು ಪ್ಲಾನ್ ಮಾಡಿದೆ. ಈ ದೊಡ್ಡ ಯೋಜನೆಯ ಭಾಗವಾಗಿ 2021 ರ ವೇಳೆಗೆ 520 ಮಿಲಿಯನ್ ಸಿರಿಂಜ್ ಅನ್ನು ದಾಸ್ತಾನು ಮಾಡುವುದಾಗಿ ಹೇಳಿದೆ.
ಕೋವಿಡ್ ಲಸಿಕೆ ಬರುವ ಮೊದಲು ದೇಶಗಳಲ್ಲಿ ಸಿರಿಂಜ್ ದಾಸ್ತಾನು ಮಾಡಲು ಈ ಯೋಜನೆ ರೂಪಿಸಿದೆ. ಇದು ಮಾನವ ಇತಿಹಾಸದ ಅತಿ ದೊಡ್ಡ ಸಾಮೂಹಿಕ ಉದ್ಯಮವಾಗಿದ್ದು, ಆದಷ್ಟು ಬೇಗ ಸಿರಿಂಜ್ಗಳನ್ನು ತಯಾರಿಸಬೇಕೆಂದು ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಯೆಟಾ ಫೋರ್ ತಿಳಿಸಿದ್ದಾರೆ.
ಸಿರಿಂಜ್ ಗಳನ್ನು ಇಡುವುದಕ್ಕಾಗಿ 5 ಮಿಲಿಯನ್ ಸುರಕ್ಷತಾ ಪೆಟ್ಟಿಗೆಗಳನ್ನ ಖರೀದಿಸಲಾಗುತ್ತಿದೆ. ಇದರಿಂದಾಗಿ ಅವುಗಳ ಸಾಗಣೆ ಸುಲಭವಾಗಿರುತ್ತೆ ಹಾಗೂ ಇತರೆ ಅಪಾಯಗಳಿಂದ ರಕ್ಷಿಸಬಹುದು. ಪ್ರತಿ ಸುರಕ್ಷತಾ ಪೆಟ್ಟಿಗೆ 100 ಸಿರಿಂಜ್ಗಳನ್ನ ಜೋಡಿಸಲಾಗುತ್ತದೆ. ಇದರಿಂದ 5 ವರ್ಷಗಳವರೆಗೆ ಸೂಜಿಗಳನ್ನ ಕೆಡದಂತೆ ಇಡಬಹುದು. ಲಸಿಕೆ ಮಾರುಕಟ್ಟೆಗೂ ಬರುವುದಕ್ಕೆ ಮುನ್ನ ಈ ರೀತಿ ಸಿರಿಂಜ್ ಸ್ಟಾಕ್ ಇಡುವುದರಿಂದ, ಮುಂದೆ ಅವುಗಳ ಬೇಡಿಕೆ ಹೆಚ್ಚಾಗದಂತೆ ಪೂರೈಕೆ ಮಾಡಬಹುದು ಅನ್ನೋದು ಫೋರ್ ಅಭಿಪ್ರಾಯ.
ಲಸಿಕೆಗಳನ್ನು ಸರಿಯಾದ ತಾಪಮಾನದಲ್ಲಿ ಸಾಗಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಯುನಿಸೆಫ್ ನಿರಂತರ ಸಂಪರ್ಕದಲ್ಲಿದ್ದು, ಸಹಾಯ ಪಡೆಯುತ್ತದೆ. ಅಲ್ಲದೆ ಲಸಿಕೆ ಹಾಗೂ ಸಿರಿಂಜ್ಗಳನ್ನ ಸ್ವೀಕರಿಸಲು ದೇಶಗಳಿಗೆ ಅಗತ್ಯ ಮಾರ್ಗದರ್ಶನ ನೀಡಲು ತಯಾರಿ ನಡೆಸಿದೆ.
ಕೋವಿಡ್ ವ್ಯಾಪಿಸುವುದಕ್ಕೂ ಮುನ್ನ ಗವಿ ಮತ್ತು ಡಬ್ಲ್ಯೂ ಹೆಚ್ಓ ಸಹಭಾಗಿತ್ವದೊಂದಿಗೆ ಯುನಿಸೆಫ್ 40 ಸಾವಿರಕ್ಕೂ ಅಧಿಕ ಕೋಲ್ಡ್ ಚೈನ್ ಫ್ರಿಡ್ಜ್ಗಳನ್ನ ಸ್ಥಾಪಿಸಿದೆ. ಇವು ಸಿರಿಂಜ್ ಗಳನ್ನ ದಾಸ್ತಾನು ಮಾಡಲು ಸಹಕಾರಿಯಾಗಿವೆ.