ಕರ್ನಾಟಕ

karnataka

ETV Bharat / international

ಯುಎನ್ ಸಭೆಯಲ್ಲಿ ಪಾಕ್​ಗೆ ಛಾಟಿ ಬೀಸಿದ ಭಾರತ! - ವಿಶ್ವಸಂಸ್ಥೆಯ 75 ವರ್ಷಗಳ ಸ್ಮರಣಾರ್ಥ ಸಭೆ

ಇಸ್ಲಾಮಾಬಾದ್ ಭಯೋತ್ಪಾದನೆಯ ಕೇಂದ್ರಬಿಂದುವಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟಿದ್ದು, ಭಯೋತ್ಪಾದಕರಿಗೆ ಆಶ್ರಯ ಮತ್ತು ತರಬೇತಿ ನೀಡುತ್ತದೆ ಎಂದು ಭಾರತ ಹೇಳಿದೆ.

un
un

By

Published : Sep 22, 2020, 12:21 PM IST

ನ್ಯೂಯಾರ್ಕ್: ವಿಶ್ವಸಂಸ್ಥೆಯ 75 ವರ್ಷಗಳ ಸ್ಮರಣಾರ್ಥ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಎತ್ತಿದ್ದಕ್ಕಾಗಿ ಭಾರತವು ಪಾಕಿಸ್ತಾನಕ್ಕೆ ಛಾಟಿ ಬೀಸಿದೆ.

ಇಸ್ಲಾಮಾಬಾದ್ ಭಯೋತ್ಪಾದನೆಯ ಕೇಂದ್ರಬಿಂದುವಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟಿದ್ದು, ಭಯೋತ್ಪಾದಕರಿಗೆ ಆಶ್ರಯ ಮತ್ತು ತರಬೇತಿ ನೀಡುತ್ತದೆ. ಅವರನ್ನು ಹುತಾತ್ಮರೆಂದು ಪ್ರಶಂಸಿಸುತ್ತದೆ ಮತ್ತು ಅಲ್ಲಿನ ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ನಿರಂತರವಾಗಿ ಹಿಂಸಿಸುತ್ತಿದೆ ಎಂದು ಭಾರತ ಹೇಳಿದೆ.

ವಿಶ್ವಸಂಸ್ಥೆಯ 75 ವರ್ಷಗಳ ಸ್ಮರಣಾರ್ಥ ವಿಶೇಷ ಸಾಮಾನ್ಯ ಸಭೆಯ ಅಧಿವೇಶನದ ವರ್ಚುವಲ್ ಆವೃತ್ತಿ ಸೋಮವಾರ ಪ್ರಾರಂಭವಾಗಿದೆ.

ABOUT THE AUTHOR

...view details