ವಿಶ್ವಸಂಸ್ಥೆ( ಅಮೆರಿಕ):ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ (Antonio Guterres) ಅವರು ಭಾರತ ಸರ್ಕಾರದ ಒಪ್ಪಿಗೆಯೊಂದಿಗೆ ಅಮೆರಿಕದ ಶೊಂಬಿ ಶಾರ್ಪ್ (Shombi Sharp) ಅವರನ್ನು ಭಾರತದಲ್ಲಿ ವಿಶ್ವಸಂಸ್ಥೆಯ ರೆಸಿಡೆಂಟ್ ಕೋಆರ್ಡಿನೇಟರ್ (UN Resident Coordinator in India) ಆಗಿ ನೇಮಕ ಮಾಡಿದ್ದಾರೆ ಎಂದು ಅಧಿಕೃತ ಹೇಳಿಕೆ ಹೊರಬಿದ್ದಿದೆ.
ಶೊಂಬಿ ಶಾರ್ಪ್ ಅವರು ಅಂತಾರಾಷ್ಟ್ರೀಯವಾಗಿ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ತಮ್ಮ ವೃತ್ತಿಜೀವನದ 25 ವರ್ಷಗಳಿಗಿಂತ ಹೆಚ್ಚು ಸಮಯವನ್ನು ಮೀಸಲಿಟ್ಟಿದ್ದಾರೆ. ಅವರು ವಿಶ್ವಸಂಸ್ಥೆಯಲ್ಲಿ ಹೊಸ ಸ್ಥಾನಕ್ಕೆ ಅವರನ್ನು ನೇಮಕ ಮಾಡಲಾಗಿದೆ ಎಂದು ವಿಶ್ವಸಂಸ್ಥೆಯು ಸೋಮವಾರ ಹೇಳಿಕೆ ಬಿಡುಗಡೆ ಮಾಡಿದೆ.
ಇತ್ತೀಚೆಗೆ ಅರ್ಮೇನಿಯಾದಲ್ಲಿ ಶೊಂಬಿ ಶಾರ್ಪ್ ಅವರುವ ವಿಶ್ವಸಂಸ್ಥೆಯ ರೆಸಿಡೆಂಟ್ ಕೋ -ಆರ್ಡಿನೇಟರ್ ಆಗಿ ಸೇವೆ ಸಲ್ಲಿಸಿದರು. ಯುನೈಟೆಡ್ ನೇಷನ್ಸ್ ಡೆವಲಪ್‌ಮೆಂಟ್ ಪ್ರೋಗ್ರಾಂನಲ್ಲಿ (UNDP) ಹಲವಾರು ಸ್ಥಾನಗಳನ್ನು ಅವರು ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೆ ಜಾರ್ಜಿಯಾದಲ್ಲಿ ಡೆಪ್ಯುಟಿ ಕೋ - ಆರ್ಡಿನೇಟರ್, ಲೆಬನಾನ್‌ನಲ್ಲಿ ಡೆಪ್ಯೂಟಿ ಕಂಟ್ರಿ ಡೈರೆಕ್ಟರ್, UNDP ಯುರೋಪ್ ಮತ್ತು ಕಾಮನ್‌ವೆಲ್ತ್‌ನಲ್ಲೂ ಹಲವು ಹುದ್ದೆಗಳ್ನು ಶಾರ್ಪ್ ನಿರ್ವಹಿಸಿದ್ದಾರೆ.