ವಿಶ್ವಸಂಸ್ಥೆ: ಆಫ್ಘನ್ನಲ್ಲಿ ಉದ್ಭವಿಸಿರುವ ಮಾನವೀಯ ಬಿಕ್ಕಟ್ಟನ್ನು ನಿಭಾಯಿಸುವ ಸಲುವಾಗಿ 1.2 ಬಿಲಿಯನ್ ಡಾಲರ್ ನೆರವು ನೀಡಲು ವಿಶ್ವಸಂಸ್ಥೆ ಮುಂದಾಗಿದೆ.
ಅಧೀನ ಕಾರ್ಯದರ್ಶಿ - ಜನರಲ್ ಮಾರ್ಟಿನ್ ಗ್ರಿಫಿತ್ಸ್, ಸೋಮವಾರ ಜಿನೀವಾದಲ್ಲಿ ನಡೆದ ಉನ್ನತ ಮಟ್ಟದ ಸಚಿವರ ಸಭೆಯ ಮುಕ್ತಾಯದ ವೇಳೆ ಈ ಭರವಸೆ ನೀಡಿದರು. 2021 ರ ವರ್ಷಾಂತ್ಯದವರೆಗೆ 11 ಮಿಲಿಯನ್ ಜನರಿಗೆ ಸಹಾಯ ಮಾಡಲು 606 ಮಿಲಿಯನ್ ಯುಎಸ್ ಡಾಲರ್ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.