ವಿಶ್ವಸಂಸ್ಥೆ :ಭಾರತದಲ್ಲಿ ಕೊರೊನಾ ಭೀಕರತೆ ಸೃಷ್ಟಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ನೀಡಬೇಕು ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 75ನೇ ಸೆಷನ್ನ ಅಧ್ಯಕ್ಷರಾದ ವೋಲ್ಕನ್ ಬೋಜ್ಕೀರ್ ಕರೆ ನೀಡಿದ್ದಾರೆ.
ಈ ಬಗ್ಗೆ ವೋಲ್ಕನ್ ಬೋಜ್ಕೀರ್ ಅವರ ವಕ್ತಾರರು ಮಾಹಿತಿ ನೀಡಿದ್ದಾರೆ. ಭಾರತದಲ್ಲಿ ಕೋವಿಡ್ ಸ್ಥಿತಿಯ ಬಗ್ಗೆ ಬೋಜ್ಕೀರ್ ಆತಂಕಕ್ಕೊಳಗಾಗಿದ್ದಾರೆ.
ಭಾರತ ಇತರ ಬಡರಾಷ್ಟ್ರಗಳಿಗೆ ವ್ಯಾಕ್ಸಿನ್ ನೀಡಿ ಸಹಕರಿಸಿದೆ ಎಂದು ವೋಲ್ಕನ್ ಬೋಜ್ಕೀರ್ ವಕ್ತಾರರಾದ ಬ್ರೆಂಡನ್ ವರ್ಮ ಹೇಳಿದ್ದಾರೆಂದು ಕ್ಸಿನುವಾ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಇದನ್ನೂ ಓದಿ:ಟಾಲಿವುಡ್ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ಗೆ ಕೊರೊನಾ
ಭಾರತದ ನೆರವಿಗೆ ವಿಶ್ವದ ರಾಷ್ಟ್ರಗಳು ಧಾವಿಸುವ ಕಾಲ ಬಂದಿದೆ. ಪ್ರತಿಯೊಬ್ಬರೂ ಸುರಕ್ಷಿತರಾಗುವ ತನಕ ಯಾರೂ ಸುರಕ್ಷಿತರಲ್ಲ ಎಂದು ವೋಲ್ಕನ್ ಬೋಜ್ಕೀರ್ ಉಲ್ಲೇಖಿಸಿದ್ದಾರೆಂದು ತಿಳಿದು ಬಂದಿದೆ. ಇದರ ಜೊತೆಗೆ ನನ್ನ ಚಿಂತನೆ ಭಾರತ ಸರ್ಕಾರ ಮತ್ತು ಜನರ ಪರವಾಗಿ ಎಂದು ಬೋಜ್ಕೀರ್ ಹೇಳಿದ್ದಾರೆ.