ಕರ್ನಾಟಕ

karnataka

ಕೋವಿಡ್​-19 ಮಣಿಸಲು ವಿಶ್ವ ಸಮುದಾಯ ಒಗ್ಗೂಡಬೇಕು: ವಿಶ್ವಸಂಸ್ಥೆ ಕರೆ

By

Published : Sep 17, 2020, 12:32 PM IST

ಕೊರೊನಾ ವೈರಸ್​ ಸದ್ಯಕ್ಕೆ ವಿಶ್ವದ ನಂ.1 ಜಾಗತಿಕ ಭದ್ರತಾ ಬೆದರಿಕೆಯಾಗಿದೆ ಎಂದು ಯುಎನ್ ಮುಖ್ಯಸ್ಥ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಹಲವರು ಲಸಿಕೆಯ ಮೇಲೆ ಭರವಸೆ ಇಟ್ಟಿದ್ದಾರೆ. ಆದರೆ ಸಾಂಕ್ರಾಮಿಕ ರೋಗಕ್ಕೆ ಯಾವುದೇ ರಾಮ ಬಾಣವಿರುವುದಿಲ್ಲ ಎಂದು ಆಂಟೋನಿಯೊ ಗುಟೆರೆಸ್ ಹೆಳಿದ್ದು, ಲಸಿಕೆ ಮಾತ್ರ ಈ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಿಲ್ಲ ಎಂದರು

un
un

ವಿಶ್ವಸಂಸ್ಥೆ: ಕೋವಿಡ್-19 ಸೋಂಕನ್ನು ಸೋಲಿಸಲು ವಿಶ್ವ ಸಮುದಾಯ ಒಗ್ಗೂಡಬೇಕೆಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಕರೆ ನೀಡಿದ್ದಾರೆ.

ಕೊರೊನಾ ವೈರಸ್​ ಸದ್ಯಕ್ಕೆ ವಿಶ್ವದ ನಂ.1 ಜಾಗತಿಕ ಭದ್ರತಾ ಬೆದರಿಕೆಯಾಗಿದೆ ಎಂದು ಯುಎನ್ ಮುಖ್ಯಸ್ಥ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಹಲವರು ಲಸಿಕೆಯ ಮೇಲೆ ಭರವಸೆ ಇಟ್ಟಿದ್ದಾರೆ. ಆದರೆ ಸಾಂಕ್ರಾಮಿಕ ರೋಗಕ್ಕೆ ಯಾವುದೇ ರಾಮ ಬಾಣವಿರುವುದಿಲ್ಲ ಎಂದು ಆಂಟೋನಿಯೊ ಗುಟೆರೆಸ್ ಹೆಳಿದ್ದು, ಲಸಿಕೆ ಮಾತ್ರ ಈ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಿಲ್ಲ ಎಂದರು.

ಎಲ್ಲರಿಗೂ ಕೈಗೆಟುಕುವ ಮತ್ತು ಲಭ್ಯವಾಗುವ ಲಸಿಕೆ ಬೇಕು. ಯಾವುದೇ ಲಸಿಕೆಯಾದರೂ ಜಗತ್ತಿನಾದ್ಯಂತ ಜನರು ಅದನ್ನು ತೆಗೆದುಕೊಳ್ಳಲು ಸಿದ್ಧರಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಲಸಿಕೆಗಳಲ್ಲಿ ಅಪನಂಬಿಕೆ ಹರಡುವ ಕಾರ್ಯ ಪ್ರಪಂಚದಾದ್ಯಂತ ಹೆಚ್ಚುತ್ತಿದ್ದು, ಕೆಲವು ದೇಶಗಳಲ್ಲಿ ಜನ ಲಸಿಕೆ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಭವಿಷ್ಯದಲ್ಲಿ ಕೋವಿಡ್-19 ಲಸಿಕೆ ತೆಗೆದುಕೊಳ್ಳುವುದರಿಂದ ಹಿಂಜರಿದಿದ್ದಾರೆ. ಕೊರೊನಾ ವೈರಸ್ ಕುರಿತು ತಪ್ಪು ಮಾಹಿತಿ ಹಬ್ಬುವುದನ್ನು ತಡೆಯಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಬೇಕು ಎಂದು ಆಂಟೋನಿಯೊ ಗುಟೆರೆಸ್ ಕರೆ ನೀಡಿದರು.

ABOUT THE AUTHOR

...view details