ಕರ್ನಾಟಕ

karnataka

ETV Bharat / international

ಕೊರೊನಾ ವೈರಸ್‌ ದಿವ್ಯಾಂಗರಿಗೆ ದೊಡ್ಡ ಹೊಡೆತ ಕೊಟ್ಟಿದೆ: ವಿಶ್ವಸಂಸ್ಥೆ ವರದಿ - ನ್ಯೂಯಾರ್ಕ್

ಕೊರೊನಾ ಬಿಕ್ಕಟ್ಟು ಸಮಾಜದ ಅತ್ಯಂತ ಕೊನೆಯಲ್ಲಿರುವ ಈ ಜನರಿಗೂ ಬಾಧೆಪಡುವಂತೆ ಮಾಡಿದೆ. ವಿಶ್ವದ ವಿಕಲಚೇತನರು ಕೋವಿಡ್-19 ನಿಂದ ತೊಂದರೆಗೊಳಗಾಗಿದ್ದಾರೆ.

UN
ವಿಶ್ವಸಂಸ್ಥೆ

By

Published : May 6, 2020, 5:08 PM IST

ನ್ಯೂಯಾರ್ಕ್​: ಕೋವಿಡ್‌ನಿಂದ ತೊಂದರೆಗೊಳಗಾದವರಲ್ಲಿ ವಿಶ್ವದ ಒಂದು ಶತಕೋಟಿ ವಿಕಲಚೇತನರೂ ಸೇರಿದ್ದಾರೆ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥ ಆ್ಯಂಟೊನಿಯೋ ಗುಟೆರಸ್‌ ತಿಳಿಸಿದ್ದಾರೆ.

ಕೊರೊನಾ ಬಿಕ್ಕಟ್ಟು ಸಮಾಜದ ಅತ್ಯಂತ ಕೊನೆಯಲ್ಲಿರುವ ಈ ಜನರಿಗೂ ಸಂಕಷ್ಟದಲ್ಲಿರುವಂತೆ ಮಾಡಿದೆ. ಅಲ್ಲದೆ ಅವರನ್ನು ಸಮಾಜದಿಂದ ಹೊರಗಡೆ ಇಡುವಂತಹ ಪ್ರಯತ್ನಗಳೂ ನಡೆಯುತ್ತಿವೆ ಎಂದು ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಬುಧವಾರ ವಿಡಿಯೊ ವರದಿಯಲ್ಲಿ ತಿಳಿಸಿದ್ದಾರೆ.

ಕೊರೊನಾ ರೋಗವು ಬಡವರು ದೌರ್ಜನ್ಯ, ನಿರ್ಲಕ್ಷ್ಯ ಮತ್ತು ನಿಂದನೆ ಅನುಭವಿಸುವುದು ಸೇರಿದಂತೆ ಈಗಾಗಲೇ ಎದುರಿಸುತ್ತಿರುವ ಅಸಮಾನತೆಗಳನ್ನು ಕೂಡಾ ತೀವ್ರಗೊಳಿಸುತ್ತಿದೆ ಮತ್ತು ಹೊಸ ಭಯವನ್ನು ಅವರಲ್ಲಿ ಉಂಟುಮಾಡುತ್ತಿದೆ ಎಂದು ಹೇಳಿದರು.

ಅಂಗವಿಕಲರಿಗೆ ಕೊರೊನಾ ಸಂಪರ್ಕವಾದರೆ ಅವರ ಅನಾರೋಗ್ಯದ ಜೊತೆಗೆ ಕೊರೊನಾ ಪರಿಹಾರಕ್ಕಾಗಿ ಪಡೆಯುವ ಚಿಕಿತ್ಸೆ ಅವರನ್ನು ಸಾವಿನೆಡೆಗೆ ದೂಡಬಹುದೆಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ಹೀಗೆಯೇ ಮುಂದುವರಿಯಲು ಬಿಡಲಾಗುವುದಿಲ್ಲ. ಇಂತಹ ಸಮಯದಲ್ಲಿ ವಿಕಲಚೇತನರ ಆರೋಗ್ಯ ರಕ್ಷಣೆ ಮತ್ತು ಅವರ ಜೀವ ಉಳಿಸುವ ಕಾರ್ಯವಿಧಾನಗಳನ್ನು ರೂಪಿಸಿ, ಅವರಿಗೂ ಸಮಾನ ಹಕ್ಕು ನೀಡಬೇಕು ಎಂದರು.

ABOUT THE AUTHOR

...view details