ಕರ್ನಾಟಕ

karnataka

ETV Bharat / international

ಕಾಬೂಲ್​ ಗುರುದ್ವಾರದ ಮೇಲಿನ ಆತ್ಮಾಹುತಿ ದಾಳಿಗೆ ವಿಶ್ವಸಂಸ್ಥೆ, ಅಮೆರಿಕ ಖಂಡನೆ - ಗುರುದ್ವಾರದ ಮೇಲಿನ ದಾಳಿಗೆ ಖಂಡನೆ

ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಗುರುದ್ವಾರದ ಮೇಲೆ ನಡೆಸಿದ ದಾಳಿಯನ್ನು ವಿಶ್ವಸಂಸ್ಥೆ ಮತ್ತು ಅಮೆರಿಕ ಖಂಡಿಸಿದೆ.

Antonio Guterres condemns Kabul Gurudwara attack,ಗುರುದ್ವಾರದ ಮೇಲಿನ ದಾಳಿಗೆ ಖಂಡನೆ
ಗುರುದ್ವಾರದ ಮೇಲಿನ ದಾಳಿಗೆ ಖಂಡನೆ

By

Published : Mar 26, 2020, 9:23 AM IST

ನ್ಯೂಯಾರ್ಕ್​(ಅಮೆರಿಕ): ನಾಗರಿಕರ ವಿರುದ್ಧದ ದಾಳಿಗಳು ಸ್ವೀಕಾರಾರ್ಹವಲ್ಲ ಮತ್ತು ಅಂತಹ ಅಪರಾಧಗಳನ್ನು ಮಾಡುವವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ವಿಶ್ವಸಂಸ್ಥೆ ಮುಖ್ಯ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಕಾಬೂಲ್‌ನಲ್ಲಿ ಗುರುದ್ವಾರದ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿದ್ದಾರೆ.

ಕಾಬೂಲ್‌ನಲ್ಲಿ ಸಿಖ್ ಸಮುದಾಯದ ಮೇಲೆ ನಡೆದ ದಾಳಿಯನ್ನು ಪ್ರಧಾನ ಕಾರ್ಯದರ್ಶಿಗಳು ಖಂಡಿಸಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ಅವರು ಸಹಾನುಭೂತಿ ವ್ಯಕ್ತಪಡಿದ್ದಾರೆ ಮತ್ತು ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲೆಂದು ಬಯಸುತ್ತಾರೆ ಎಂದು ಪ್ರಧಾನ ಕಾರ್ಯದರ್ಶಿ ಗುಟೆರೆಸ್ ಅವರ ವಕ್ತಾರ ಸ್ಟೀಫನ್ ಡುಜಾರಿಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇತ್ತ ಅಮೆರಿಕ ಕೂಡ ದಾಳಿಯನ್ನು ಖಂಡಿಸಿದ್ದು, ಐಎಸ್​ಐಎಸ್​ ಉಗ್ರ ಸಂಘಟನೆ ವಿರುದ್ಧದ ಹೋರಾಟಕ್ಕೆ ಅಫ್ಘನ್ನರಿಗೆ ಒಂದು ಪ್ರಾಥಮಿಕ ಅವಕಾಶ ಒದಗಿಬಂದಿದೆ. ಈ ಅವಕಾಶವನ್ನು ಸ್ವೀಕರಿಸಲು ನಾವು ಎಲ್ಲಾ ಆಫ್ಘನ್ನರನ್ನು ಪ್ರೋತ್ಸಾಹಿಸುತ್ತೇವೆ ಎಂದು ಅಮೆರಿಗೆ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದ್ದಾರೆ.

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಪ್ರಮುಖ ಗುರುದ್ವಾರದ ಮೇಲೆ ಶಸ್ತ್ರಸಜ್ಜಿತ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಕನಿಷ್ಠ 25 ಮಂದಿ ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ.

ABOUT THE AUTHOR

...view details