ಕರ್ನಾಟಕ

karnataka

ಬಿಳಿಯ ಖಂಡ ಅಂಟಾರ್ಟಿಕಾದಲ್ಲಿ ದಾಖಲೆಯ ತಾಪಮಾನ ದೃಢ

By

Published : Jul 2, 2021, 4:56 AM IST

ಅಂಟಾರ್ಟಿಕಾ ಖಂಡದಲ್ಲಿ ಸುಮಾರು 50 ವರ್ಷಗಳಲ್ಲಿ 3 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾಗಿದೆ ಎಂದು ಜಾಗತಿಕ ಹವಾಮಾನ ಸಂಘಟನೆಯ ಮಹಾನಿರ್ದೇಶಕ ಪೆಟ್ಟೇರಿ ಟಾಲಸ್ ಮಾಹಿತಿ ನೀಡಿದ್ದಾರೆ.

UN agency confirms 18.3C record heat in Antarctica
ಬಿಳಿಯ ಖಂಡ ಅಂಟಾರ್ಟಿಕಾದಲ್ಲಿ ದಾಖಲೆಯ ತಾಪಮಾನ ದೃಢ

ಜಿನೇವಾ, ಸ್ವಿಟ್ಜರ್​ಲ್ಯಾಂಡ್​:ಬಿಳಿಯ ಖಂಡ ಎಂದೇ ಕರೆಸಿಕೊಂಡಿರುವ ಅಂಟಾರ್ಟಿಕಾ ಖಂಡದಲ್ಲಿ 2020ರ ಫೆಬ್ರವರಿ 6ರಂದು ದಾಖಲೆ ಪ್ರಮಾಣದಲ್ಲಿ ತಾಪಮಾನ ದಾಖಲಾಗಿದೆ ಎಂದು ವಿಶ್ವಸಂಸ್ಥೆಯ ಜಾಗತಿಕ ಹವಾಮಾನ ಸಂಘಟನೆ ಮಾಹಿತಿ ನೀಡಿದೆ.

ಅಂಟಾರ್ಟಿಕಾದಲ್ಲಿ 2020ರ ಫೆಬ್ರವರಿ 6ರಂದು 18.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಈವರೆಗೆ ದಾಖಲಾದ ಅತಿ ಹೆಚ್ಚು ತಾಪಮಾನವಾಗಿದೆ. ಫ್ಯಾರನ್​ಹೀಟ್​ನಲ್ಲಿ ಇಲ್ಲಿನ ತಾಪಮಾನ 64.9 ಡಿಗ್ರಿ ಇರಲಿದೆ.

ವಿಶ್ವಸಂಸ್ಥೆಯ ಜಾಗತಿಕ ಹವಾಮಾನ ಸಂಘಟನೆ ಗುರುವಾರ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಅಂಟಾರ್ಟಿಕಾದಲ್ಲಿ ಅರ್ಜೆಂಟಿನಾಗೆ ಸಂಬಂಧಿಸಿದ ಎಸ್ಪೆರಂಝಾ ರಿಸರ್ಚ್​​​ ಸ್ಟೇಷನ್​ ಬಳಿ ತಾಪಮಾನ ದಾಖಲಾಗಿದೆ ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ:ಮದುವೆಯಾದ ತಕ್ಷಣ ಮದುವೆ ಮಂಟಪದಿಂದ ಹೊರ ಬಂದ ವಧು ಮಾಡಿದ್ದೇನು ಗೊತ್ತಾ..?

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಾಗತಿಕ ಹವಾಮಾನ ಸಂಘಟನೆಯ ಮಹಾನಿರ್ದೇಶಕ ಪೆಟ್ಟೇರಿ ಟಾಲಸ್ ಅಂಟಾರ್ಟಿಕಾ ಖಂಡದಲ್ಲಿ ಸುಮಾರು 50 ವರ್ಷಗಳಲ್ಲಿ 3 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾಗಿದೆ ಎಂದಿದ್ದಾರೆ.

ಇದಕ್ಕೂ ಮೊದಲು 2015ರ ಮಾರ್ಚ್ 24ರಂದು 17.5ರಷ್ಟು ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಅಂಟಾರ್ಟಿಕಾ ಖಂಡದಲ್ಲಿ ದಾಖಲಾಗಿದ್ದ ಅತಿ ಹೆಚ್ಚು ತಾಪಮಾನವಾಗಿತ್ತು.

ಇಷ್ಟೇ ಅಲ್ಲದೇ ಅಂಟಾರ್ಟಿಕಾ ಖಂಡದ ಸೈಮೋರ್ ದ್ವೀಪದಲ್ಲಿ 20.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು ಎಂಬ ವಾದವನ್ನು ಜಾಗತಿಕ ಹವಾಮಾನ ಸಂಘಟನೆ ತಿರಸ್ಕರಿಸಿದೆ.

ABOUT THE AUTHOR

...view details