ಕರ್ನಾಟಕ

karnataka

ETV Bharat / international

'ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಂಡು ಯುದ್ಧ ಗೆಲ್ಲುತ್ತದೆ' - ರಷ್ಯಾ ಸೈನಿಕರು

ಜಗತ್ತು ಪುಟಿನ್ ಅವರ ಆಕ್ರಮಣಕಾರಿ ನಡೆಯನ್ನು ತಡೆಯಬೇಕು. ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ ಮತ್ತು ಈ ಯುದ್ಧವನ್ನು ಗೆಲ್ಲುತ್ತದೆ ಎಂದು ಉಕ್ರೇನ್ ವಿದೇಶಾಂಗ ಸಚಿವರು ತಿಳಿಸಿದ್ದಾರೆ.

ಉಕ್ರೇನ್ ವಿದೇಶಾಂಗ ಸಚಿವ
ಉಕ್ರೇನ್ ವಿದೇಶಾಂಗ ಸಚಿವ

By

Published : Feb 24, 2022, 10:57 AM IST

Updated : Feb 24, 2022, 12:15 PM IST

ಕೀವ್ (ಉಕ್ರೇನ್): ರಷ್ಯಾ ವಿರುದ್ಧ ಉಕ್ರೇನ್ ಆಕ್ರೋಶ ವ್ಯಕ್ತಪಡಿಸಿದ್ದು, ಈ ಯುದ್ಧವನ್ನು ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.

ಪುಟಿನ್ ಆದೇಶದಂತೆ ರಷ್ಯಾ ಸೇನೆ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ಪ್ರಾರಂಭಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಉಕ್ರೇನ್​ ಸೈನಿಕರು ಸಹ ಹೋರಾಡುತ್ತಿದ್ದಾರೆ. ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ ಮತ್ತು ಈ ಯುದ್ಧವನ್ನು ಗೆಲ್ಲುತ್ತದೆ ಎಂದು ಉಕ್ರೇನ್ ವಿದೇಶಾಂಗ ಸಚಿವರು ತಿಳಿಸಿದ್ದಾರೆ.

ಇದೊಂದು ಆಕ್ರಮಣಕಾರಿ ನಡೆ. ಶಾಂತಿಯುತ ಉಕ್ರೇನ್​ ನಗರಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಜಗತ್ತು ಪುಟಿನ್ ಅವರ ಆಕ್ರಮಣಕಾರಿ ನಡೆಯನ್ನು ತಡೆಯಬೇಕು ಎಂದು ಅವರು ಇತರೆ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ರಷ್ಯಾ ಅಧ್ಯಕ್ಷ ಪುಟಿನ್!

Last Updated : Feb 24, 2022, 12:15 PM IST

ABOUT THE AUTHOR

...view details