ಕರ್ನಾಟಕ

karnataka

ETV Bharat / international

14 ಮಕ್ಕಳು ಸೇರಿ 352 ಮಂದಿ ಸಾವು ಎಂದ ಉಕ್ರೇನ್‌; ಮೊದಲ ಬಾರಿಗೆ ಪ್ರಾಣಹಾನಿ ಒಪ್ಪಿಕೊಂಡ ರಷ್ಯಾ - ರಷ್ಯಾ ದಾಳಿಗೆ ಉಕ್ರೇನ್​ನಲ್ಲಿ 14 ಮಕ್ಕಳು ಸೇರಿದಂತೆ 352 ನಾಗರಿಕರು ಬಲಿ

ರಷ್ಯಾದ ಭೀಕರ ದಾಳಿಯಿಂದ ಉಕ್ರೇನ್​ನಲ್ಲಿ 14 ಮಕ್ಕಳು ಸೇರಿದಂತೆ 352 ಮಂದಿ ನಾಗರಿಕರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ ಉಕ್ರೇನ್‌ನ ಸಶಸ್ತ್ರ ಪಡೆಗಳ ಸಾವುನೋವುಗಳ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ರಷ್ಯಾ ದಾಳಿ
ರಷ್ಯಾ ದಾಳಿ

By

Published : Feb 28, 2022, 8:53 AM IST

ಕೀವ್(ಉಕ್ರೇನ್): ರಷ್ಯಾದ ಆಕ್ರಮಣಕಾರಿ ದಾಳಿಯಿಂದ 14 ಮಕ್ಕಳು ಸೇರಿದಂತೆ 352 ಮಂದಿ ನಾಗರಿಕರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ತಿಳಿಸಿದೆ.

ಈ ಕುರಿತು ಬಾನುವಾರ ಉಕ್ರೇನ್​ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ದಾಳಿಯಲ್ಲಿ 1,684 ಜನ ಗಾಯಗೊಂಡಿದ್ದಾರೆ ಎಂದು ಹೇಳಿದೆ. ಆದರೆ, ತನ್ನ ಸಶಸ್ತ್ರ ಪಡೆಗಳ ಸಾವುನೋವುಗಳ ಕುರಿತು ಯಾವುದೇ ಮಾಹಿತಿ ನೀಡಿಲ್ಲ.

ತಮ್ಮ ಪಡೆಗಳು ಉಕ್ರೇನಿಯನ್ ಮಿಲಿಟರಿಯನ್ನು ಮಾತ್ರ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ ಎಂದು ಹೇಳಿರುವ ರಷ್ಯಾ, ಉಕ್ರೇನ್‌ ನಾಗರಿಕರಿಗೆ ಯಾವುದೇ ಅಪಾಯವಿಲ್ಲ ಎಂದಿದೆ.

ಮೊದಲ ಬಾರಿಗೆ ಸಾವುನೋವು ಒಪ್ಪಿಕೊಂಡ ರಷ್ಯಾ: ರಷ್ಯಾದ ರಕ್ಷಣಾ ಸಚಿವಾಲಯವು ಸೂಕ್ತ ಅಂಕಿಅಂಶಗಳನ್ನು ನೀಡದೆ, ನಮ್ಮ ಸೈನಿಕರು ಸಹ ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದಷ್ಟೇ ಮಾಹಿತಿ ನೀಡಿದೆ.

ABOUT THE AUTHOR

...view details