ಕರ್ನಾಟಕ

karnataka

ರಷ್ಯಾ-ಉಕ್ರೇನ್‌ ಯುದ್ಧ : ಪುಟಿನ್ ಹೆಚ್ಚು ಮಾರಕ ಶಸ್ತ್ರಾಸ್ತ್ರಗಳಿಂದ ದಾಳಿ ಮಾಡಬಹುದು ಎಂದ ಯುಕೆ ಸಚಿವರು

By

Published : Feb 27, 2022, 5:00 PM IST

Updated : Jul 23, 2022, 3:04 PM IST

ಇದು ಪುಟಿನ್ ಅವರ ಅಂತ್ಯದ ಆರಂಭವಾಗಿರಬಹುದು. ಈ ಯುದ್ಧದಲ್ಲಿ ಅವರು ಅತ್ಯಂತ ಅಹಿತಕರ ವಿಧಾನಗಳನ್ನು ಬಳಸಲು ನಿರ್ಧರಿಸಿದ್ದಾರೆ. ಈ ವಿಷಯಕ್ಕೆ ನಾನು ಹೆದರುತ್ತೇನೆ. ಈ ಸಂಘರ್ಷವು ತುಂಬಾ ರಕ್ತಸಿಕ್ತವಾಗಿರಬಹುದು. ಹೀಗಾಗಿ, ನಾವು ಅದನ್ನು ಎದುರಿಸಲು ಸಿದ್ಧರಾಗಿರಬೇಕು ಎಂದರು..

ಪುಟಿನ್ ಹೆಚ್ಚು ಮಾರಕ ಶಸ್ತ್ರಾಸ್ತ್ರಗಳಿಂದ ದಾಳಿ ಮಾಡಬಹುದು ಎಂದ ಯುಕೆ ಸಚಿವರು
ಪುಟಿನ್ ಹೆಚ್ಚು ಮಾರಕ ಶಸ್ತ್ರಾಸ್ತ್ರಗಳಿಂದ ದಾಳಿ ಮಾಡಬಹುದು ಎಂದ ಯುಕೆ ಸಚಿವರು

ಲಂಡನ್: ರಷ್ಯಾ-ಉಕ್ರೇನ್ ಸಂಘರ್ಷವು ವರ್ಷಗಳವರೆಗೆ ಉಳಿಯಬಹುದು ಮತ್ತು ಮಾಸ್ಕೋ ಇನ್ನೂ ಕೆಟ್ಟ ಶಸ್ತ್ರಾಸ್ತ್ರಗಳನ್ನು ಬಳಸಲು ಪ್ರಯತ್ನಿಸುತ್ತಿದೆ. ಜಗತ್ತು ಇದಕ್ಕೆ ಸಿದ್ಧವಾಗಬೇಕಿದೆ ಎಂದು ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಎಚ್ಚರಿಸಿದ್ದಾರೆ.

ರಷ್ಯಾ ಪ್ರಬಲ ಪಡೆಗಳನ್ನು ಹೊಂದಿದೆ. ಹಾಗೆ ಉಕ್ರೇನಿಯನ್ನರು ಧೈರ್ಯಶಾಲಿಗಳು ಎಂದು ನಮಗೆ ತಿಳಿದಿದೆ. ಅವರು ತಮ್ಮ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗಾಗಿ ನಿಲ್ಲಲು ನಿರ್ಧರಿಸಿದ್ದಾರೆ ಎಂದರು.

ಉಕ್ರೇನಿಯನ್ ಪಡೆಗಳು ರಷ್ಯಾದ ದಾಳಿಯನ್ನು ವಿರೋಧಿಸುವುದನ್ನು ಮುಂದುವರೆಸುತ್ತಿವೆ. ಆದರೆ, ಇದರಿಂದ ರಾತ್ರೋರಾತ್ರಿ ಮಹತ್ವದ ಬದಲಾವಣೆಗಳೇನೂ ಆಗಿಲ್ಲ ಎಂದು ಗುಪ್ತಚರದಿಂದ ತಿಳಿದು ಬಂದಿದೆ ಎಂದು ಸಚಿವರು ಉಲ್ಲೇಖಿಸಿದರು. ಆದರೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇನ್ನಷ್ಟು ಮಾರಕ ಶಸ್ತ್ರಾಸ್ತ್ರಗಳನ್ನು ಅಲ್ಲಿಗೆ ನಿಯೋಜಿಸಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ:ಚಿಕ್ಕಬಳ್ಳಾಪುರದಲ್ಲಿ ಗ್ಯಾಸ್​ ಸಿಲಿಂಡರ್ ಸ್ಫೋಟ : ಮನೆ ಛಿದ್ರ ಛಿದ್ರ-ಗಂಭೀರವಾಗಿ ಗಾಯಗೊಂಡ ದಂಪತಿ!

ಇದು ಪುಟಿನ್ ಅವರ ಅಂತ್ಯದ ಆರಂಭವಾಗಿರಬಹುದು. ಈ ಯುದ್ಧದಲ್ಲಿ ಅವರು ಅತ್ಯಂತ ಅಹಿತಕರ ವಿಧಾನಗಳನ್ನು ಬಳಸಲು ನಿರ್ಧರಿಸಿದ್ದಾರೆ. ಈ ವಿಷಯಕ್ಕೆ ನಾನು ಹೆದರುತ್ತೇನೆ. ಈ ಸಂಘರ್ಷವು ತುಂಬಾ ರಕ್ತಸಿಕ್ತವಾಗಿರಬಹುದು. ಹೀಗಾಗಿ, ನಾವು ಅದನ್ನು ಎದುರಿಸಲು ಸಿದ್ಧರಾಗಿರಬೇಕು ಎಂದರು.

ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಈಗಾಗಲೇ ಉಕ್ರೇನ್‌ನಲ್ಲಿ ಏನಾಗುತ್ತಿದೆ ಎಂಬುದನ್ನು ಗಮನಿಸುತ್ತಿದೆ. ವೈಯಕ್ತಿಕವಾಗಿ ಅವರಿಗೆ ಗಂಭೀರ ಪರಿಣಾಮಗಳು ಉಂಟಾಗುತ್ತವೆ ಎಂದು ಅವರು ಇದೇ ವೇಳೆ ತಿಳಿಸಿದರು.

ಇನ್ನು SWIFT ಇಂಟರ್‌ಬ್ಯಾಂಕ್ ವ್ಯವಸ್ಥೆಯಿಂದ ರಷ್ಯಾದ ಹಲವಾರು ಬ್ಯಾಂಕ್‌ಗಳನ್ನು ಹೊರಗಿಡುವುದು ಸೇರಿದಂತೆ ರಷ್ಯಾದ ವಿರುದ್ಧ ಹೊಸ ಆರ್ಥಿಕ ನಿರ್ಬಂಧಗಳನ್ನು ಹೇರಲು ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಶನಿವಾರ ಒಪ್ಪಿಕೊಂಡಿವೆ ಎಂದರು.

Last Updated : Jul 23, 2022, 3:04 PM IST

ABOUT THE AUTHOR

...view details