ಕರ್ನಾಟಕ

karnataka

ETV Bharat / international

ರಕ್ಷಣಾ ಕಾರ್ಯದರ್ಶಿ ಎಸ್ಪರ್ ವಜಾ ಬಳಿಕ ಇಬ್ಬರು ಉನ್ನತ ಶ್ರೇಣಿಯ ಅಧಿಕಾರಿಗಳ ರಾಜೀನಾಮೆ! - ಅಮೆರಿಕಾಕ್ಕೆ ಹೊಸ ರಕ್ಷಣಾ ಕಾರ್ಯದರ್ಶಿ ಆಯ್ಕೆ

ಅಮೆರಿಕ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಅವರನ್ನು ವಜಾ ಮಾಡಿದ ನಂತರ ಗುಪ್ತಚರ ವಿಭಾಗದ ಇಬ್ಬರು ಉನ್ನತ ಅಧಿಕಾರಿಗಳು ರಾಜೀನಾಮೆ ನೀಡಿ ಅಧಿಕಾರದಿಂದ ಕೆಳಗಿಳಿದಿದ್ದಾರೆ.

termination
ರಕ್ಷಣಾ ಕಾರ್ಯದರ್ಶಿ ಎಸ್ಪರ್ ವಜಾ

By

Published : Nov 11, 2020, 5:34 PM IST

ವಾಷಿಂಗ್ಟನ್​​​: ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಮಾಜಿ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಅವರನ್ನು ವಜಾ ಮಾಡಿದ ನಂತರ, ಇಬ್ಬರು ಉನ್ನತ ಶ್ರೇಣಿಯ ಪೆಂಟಗನ್ ಅಧಿಕಾರಿಗಳು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

ಈ ಕುರಿತು ಸಂದೇಶವೊಂದನ್ನು ಕಳಿಸಿರುವ ಕೆರ್ನಾನ್ "ನನ್ನ ರಾಜೀನಾಮೆಯನ್ನು ಯುಎಸ್​​​​​​ಡಿ (ಐ & ಎಸ್) ಎಂದು ನಾನು ಟೆಂಡರ್ ಮಾಡಿದ್ದೇನೆ, ಅದು ಜಾರಿಗೆ ಬರಲಿದೆ. ನಮ್ಮ ರಾಷ್ಟ್ರದ ಬಗ್ಗೆ ನಿಮ್ಮ ದಣಿವರಿಯದ ಬದ್ಧತೆ ಮತ್ತು ಕಳೆದ ಮೂರು ವರ್ಷಗಳಿಂದ ವೈಯಕ್ತಿಕವಾಗಿ ನನ್ನನ್ನು ಬೆಂಬಲಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಎಲ್ಲರೊಂದಿಗೆ ಸೇವೆ ಸಲ್ಲಿಸಿದ್ದು ನನ್ನ ಪುಣ್ಯ. ಈ ರಾಷ್ಟ್ರದ ಸುರಕ್ಷತೆಗಾಗಿ ನಿಮ್ಮ ಶ್ರಮವನ್ನು ನಿಮ್ಮ ಪ್ರಯತ್ನಗಳು ಮುಂದುವರಿಯುತ್ತೇವೆ ಎಂದು ನಾನು ಭಾವಿಸಿದ್ದೇನೆ "ಎಂದು ಕೆರ್ನಾನ್ ರಾಜೀನಾಮೆ ನೀಡಿದ ನಂತರ ಸಹೋದ್ಯೋಗಿಗಳಿಗೆ ನೀಡಿದ ಸಂದೇಶದಲ್ಲಿ ತಿಳಿಸಿದ್ದಾರೆ.
ಆದರೆ, ಚುನಾವಣೆಯ ನಂತರ ಕೆರ್ನಾನ್ ಅವರು ರಾಜೀನಾಮೆ ನೀಡಲು ಮೊದಲೇ ಯೋಚಿಸಿದ್ದರು ಎಂದು ಅವರ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ. ಮತ್ತೊಬ್ಬ ಅಧಿಕಾರಿ ಆಗಸ್ಟ್ 2018 ರಲ್ಲಿ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಆಂಡರ್ಸನ್ ಕಳೆದ ಜೂನ್​ನಿಂದ ಆ್ಯಕ್ಟಿಂಗ್​ ಸೆಕ್ರೆಟರಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನು ಪೆಂಟಗನ್‌ನಲ್ಲಿ ಉನ್ನತ ಶ್ರೇಣಿಯ ಸಿಬ್ಬಂದಿ ಸ್ಥಾನಗಳು ಕಳೆದ ವರ್ಷದಲ್ಲಿ ತುಂಬಿವೆ. ಅದರಲ್ಲಿ ಕೆಲವು ಅಧಿಕಾರಿಗಳು ರಾಜೀನಾಮೆ ನೀಡಿ ಹೊರಟು ಹೋಗಿದ್ದಾರೆ.

2019 ರಲ್ಲಿ ಎಸ್ಪರ್ ಅವರನ್ನು ರಕ್ಷಣಾ ಕಾರ್ಯದರ್ಶಿಯಾಗಿ ಟ್ರಂಪ್​ ನೇಮಿಸಿದ್ದರು. ಇದೀಗ ಅವರನ್ನು ವಜಾ ಮಾಡಿ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ನಿರ್ದೇಶಕ ಕ್ರಿಸ್ಟೋಫರ್ ಸಿ ಮಿಲ್ಲರ್ ಅವರು ರಕ್ಷಣಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಘೋಷಿಸಿದ್ದಾರೆ.

ABOUT THE AUTHOR

...view details