ಮೆಕ್ಸಿಕೊ:ಮೆಕ್ಸಿಕೋದ ಟೋರಿನ್ ಶಾಲೆಯೊಂದರಲ್ಲಿ 12 ವರ್ಷದ ಬಾಲಕ ಗುಂಡಿನ ದಾಳಿ ನಡೆಸಿದ್ದು, ಆತನು ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಈ ದಾಳಿಯಲ್ಲಿ ಆರಕ್ಕೂ ಹೆಚ್ಚು ಮಂದಿಗೆ ತೀವ್ರ ಗಾಯಗಳಾಗಿವೆ.
ಶಾಲೆಗೆ ನುಗ್ಗಿದ 12ರ ಬಾಲಕ.... ಮನಬಂದಂತೆ ಗುಂಡಿಟ್ಟು, ತಾನೂ ಶೂಟ್ ಮಾಡಿಕೊಂಡ! - ಮೆಕ್ಸಿಕೊ ಶಾಲೆಯ ಶೂಟಿಂಗ್‌ನಲ್ಲಿ 12 ವರ್ಷದ ಶಂಕಿತ ಸೇರಿದಂತೆ ಇಬ್ಬರು ಸಾವು
ಮೆಕ್ಸಿಕನ್ ನಗರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟರೆ, 06 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೆಕ್ಸಿಕೊ ಶಾಲೆಯ ಶೂಟಿಂಗ್
ವರದಿಯ ಪ್ರಕಾರ, ಆರನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ 12 ವರ್ಷದ ಬಾಲಕ ಹಲ್ಲೆಕೋರನು ಕೊವಾಹಿಲಾ ರಾಜ್ಯದ ಸೆರ್ವಾಂಟೆಸ್ ಡಿ ಟೊರಿನ್ ಪ್ರಾಥಮಿಕ ಶಾಲೆಗೆ ನುಗ್ಗಿ ಮನ ಬಂದಂತೆ ಗುಂಡಿನ ದಾಳಿ ನಡೆಸಿ ಬಳಿಗೆ ತಾನೇ ಗುಂಡಿಟ್ಟುಕೊಂಡು ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.ಗಾಯಗೊಂಡ ಆರು ಜನರಲ್ಲಿ ಐವರು ವಿದ್ಯಾರ್ಥಿಗಳಿದ್ದರೆ, ಇನ್ನೊಬ್ಬರು ಶಿಕ್ಷಕರಾಗಿದ್ದಾರೆ.
ಗುಂಡಿನ ದಾಳಿಗೆ ಕಾರಣ ಏನು, 12 ವರ್ಷದ ಬಾಲಕ ಈ ನಿರ್ಧಾರ ಕೈಗೊಂಡಿದ್ದೇಕೆ ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದು, ತನಿಖೆ ಬಳಿಕವೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.