ಬ್ರೆಜಿಲಿಯಾ :ಎರಡು ನವಜಾತ ಶಿಶುಗಳಿಗೆ ಫೈಜರ್ ಲಸಿಕೆ ಕೊಟ್ಟು ನರ್ಸ್ ಎಡವಟ್ಟು ಮಾಡಿದ್ದಾರೆ. ಆರೋಗ್ಯದಲ್ಲಿ ಏರುಪೇರಾದ ಕಾರಣ ಹಸುಳೆಗಳಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಬ್ರೆಜಿಲ್ನಲ್ಲಿ ನಡೆದಿದೆ.
ಡಿಫ್ತೀರಿಯಾ (ಉಸಿರಾಟದ ಸಮಸ್ಯೆ), ಪೆರ್ಟುಸಿಸ್ (ನಾಯಿ ಕೆಮ್ಮು) ಹಾಗೂ ಹೆಪಟೈಟಿಸ್ ಬಿನಿಂದ ಬಳಲುತ್ತಿದ್ದ ಎರಡು ತಿಂಗಳ ಹೆಣ್ಣು ಮಗು ಮತ್ತು ನಾಲ್ಕು ತಿಂಗಳ ಗಂಡು ಮಗುವಿಗೆ ರೋಗನಿರೋಧಕ ಲಸಿಕೆ ನೀಡುವ ಬದಲಿಗೆ ನರ್ಸ್‌ವೊಬ್ಬರು ತಪ್ಪಾಗಿ ಕೋವಿಡ್ ವಿರುದ್ಧ ಹೋರಾಡುವ ಫೈಜರ್ ವ್ಯಾಕ್ಸಿನ್ ನೀಡಿದ್ದಾರೆ.