ಕರ್ನಾಟಕ

karnataka

ETV Bharat / international

'ಜೀವನ ಚಿಕ್ಕದು, ಜನರ ನೆರವಿಗೆ ಏನೆಲ್ಲಾ ಆಗುತ್ತೋ ಮಾಡೋಣ': 1 ಬಿಲಿಯನ್‌ ಡಾಲರ್‌ ಕೊಟ್ಟ ಟ್ವಿಟರ್ ಬಾಸ್ - ಕೊರೊನಾ ಪರಿಹಾರ ನಿಧಿಗೆ ಟ್ವಿಟರ್​​ ಸಿಎಒ ದೇಣಿಗೆ

ಟ್ವಿಟರ್ ಸಿಇಒ ಜಾಕ್ ಡಾರ್ಸೆ ಕೋವಿಡ್​​-19 ಪರಿಹಾರ ನಿಧಿಗೆ ಒಂದು ಬಿಲಿಯನ್​​ ಡಾಲರ್ ಹಣವನ್ನು ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.

ಕೊರೊನಾ ಪರಿಹಾರ ನಿಧಿಗೆ ಟ್ವಿಟರ್​​ ಸಿಎಒ ಜ್ಯಾಕ್ ಡಾರ್ಸೆ ಒಂದು ಬಿಲಿಯನ್​ ದೇಣಿಗೆ
Twitter's Jack Dorsey pledges $1 bn for COVID-19 relief effort

By

Published : Apr 8, 2020, 5:11 PM IST

Updated : Apr 9, 2020, 5:03 PM IST

ಸ್ಯಾನ್​​ ಪ್ರಾನ್ಸಿಸ್ಕೋ:ಟ್ವಿಟರ್ ಸಹ ಸಂಸ್ಥಾಪಕ ಸಿಇಒ ಜಾಕ್ ಡಾರ್ಸೆ ಕೊರೊನಾ ವೈರಸ್​​ ಪರಿಹಾರ ನಿಧಿಗೆ ಒಂದು ಬಿಲಿಯನ್​​ ಹಣ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್​ ಮಾಡಿರುವ ಅವರು, ತಮ್ಮ ಸ್ವಂತ ಸಂಪಾದನೆಯ ಈ ಹಣವನ್ನು ನೀಡುತ್ತಿದ್ದೇನೆ. ಇದೇ ರೀತಿ ಇನ್ನೂ ಹಲವರು ಮುಂದೆ ಬಂದು ದೇಣಿಗೆ ನೀಡಲು ಇದು ಪ್ರೇರೇಪಿಸುತ್ತದೆ. ಜೀವನ ತುಂಬಾ ಚಿಕ್ಕದಿದೆ. ಹೀಗಾಗಿ ಜನರ ಸಹಾಯಕ್ಕೆ ನಾವು ಏನೆಲ್ಲಾ ಮಾಡಲು ಸಾಧ್ಯವಿದೆಯೋ ಅದನ್ನು ಮಾಡೋಣ ಎಂದು ತಿಳಿಸಿದ್ದಾರೆ.

ಒಟ್ಟಾರೆ ತಮ್ಮ ಒಟ್ಟು ಸಂಪತ್ತಿನ ಶೇ.28 ರಷ್ಟನ್ನು ಡಾರ್ಸೆ ಈ ನಿಧಿಗಾಗಿ ನೀಡುತ್ತಿದ್ದಾರೆ. ಕೊರೊನಾ ಸಾಂಕ್ರಾಮಿಕ ರೋಗವು ಕೊನೆಗೊಂಡ ನಂತರ, ತಾವು ಸ್ಥಾಪಿಸಿರುವ ಈ ಪರಿಹಾರ ನಿಧಿ ಬಾಲಕಿಯರ ಆರೋಗ್ಯ ಮತ್ತು ಶಿಕ್ಷಣಕ್ಕೆ ಬಳಕೆಯಾಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Last Updated : Apr 9, 2020, 5:03 PM IST

For All Latest Updates

TAGGED:

ABOUT THE AUTHOR

...view details