ಸ್ಯಾನ್ ಫ್ರಾನ್ಸಿಸ್ಕೋ:ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ (ಸಿಡಿಸಿ) ಹೊರಡಿಸಿದ ಹೊಸ ಮಾರ್ಗಸೂಚಿಯಿಂದಾಗಿ ಟ್ವಿಟರ್ನ ನ್ಯೂಯಾರ್ಕ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದ ತನ್ನ ಕಚೇರಿಗಳನ್ನು ಮುಚ್ಚುವುದಾಗಿ ಪ್ರಕಟಿಸಿದೆ. ಟ್ವಿಟ್ಟರ್ ಎರಡು ವಾರಗಳ ಹಿಂದೆ ಅಂದ್ರೆ ಜುಲೈ 12 ರಂದು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕಚೇರಿಗಳನ್ನು ಮತ್ತೆ ಪುನಾರಂಭಿಸಿತ್ತು.
ಟ್ವಿಟರ್ ನ್ಯೂಯಾರ್ಕ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಮ್ಮ ಕಚೇರಿಗಳನ್ನು ಮುಚ್ಚುವ ನಿರ್ಧಾರವನ್ನು ತೆಗೆದುಕೊಂಡಿದ್ದು, ಆದಷ್ಟು ಬೇಗ ಕಚೇರಿಗಳನ್ನು ಮುಚ್ಚಲಾಗುವುದು. ನಾವು ಸ್ಥಳೀಯ ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಮ್ಮ ಟ್ವೀಪ್ಸ್ ಸುರಕ್ಷತೆಗೆ ಆದ್ಯತೆ ನೀಡುವ ಅಗತ್ಯ ಬದಲಾವಣೆಗಳನ್ನು ಮಾಡುತ್ತಿದ್ದೇವೆ ಎಂದು ಕಂಪನಿಯ ವಕ್ತಾರರು ಟೆಕ್ಕ್ರಂಚ್ ಬುಧವಾರ ತಿಳಿಸಿದ್ದಾರೆ.