ವಾಷಿಂಗ್ಟನ್:ಟ್ರಂಪ್ ಪರ ನಿಂತ ಸಾವಿರಾರು ಜನರು ಅಮೆರಿಕ ಕ್ಯಾಪಿಟಲ್ಗೆ ಮುತ್ತಿಗೆ ಹಾಕಿದ ಹಿನ್ನೆಲೆಯಲ್ಲಿ ಹಿಂಸಾಚಾರವನ್ನು ಮತ್ತಷ್ಟು ಪ್ರಚೋದಿಸುವ ಅಪಾಯವನ್ನು ಉಲ್ಲೇಖಿಸಿ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ಶುಕ್ರವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಿದೆ.
"@RealDonaldTrump ಖಾತೆಯಿಂದ ಇತ್ತೀಚಿನ ಟ್ವೀಟ್‌ಗಳನ್ನು ಮತ್ತು ಅವುಗಳ ಸನ್ನಿವೇಶವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ನಿರ್ದಿಷ್ಟವಾಗಿ ಅವುಗಳನ್ನು ಟ್ವಿಟರ್‌ನಲ್ಲಿ ಮತ್ತು ಹೊರಗೆ ಹೇಗೆ ಸ್ವೀಕರಿಸಲಾಗುತ್ತಿದೆ ಮತ್ತು ವ್ಯಾಖ್ಯಾನಿಸಲಾಗುತ್ತಿದೆ ಎಂಬುದನ್ನು ಪರಿಶೀಲಿಸಿದ್ದೇವೆ. ಹೀಗಾಗಿ ಹಿಂಸಾಚಾರವನ್ನು ಮತ್ತಷ್ಟು ಪ್ರಚೋದಿಸುವ ಅಪಾಯದಿಂದಾಗಿ ನಾವು ಈ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಿದ್ದೇವೆ" ಎಂದು ಟ್ವಿಟರ್ ತಿಳಿಸಿದೆ.