ಕರ್ನಾಟಕ

karnataka

ETV Bharat / international

ಕಾಶ್ಮೀರ ಕುರಿತ ಟ್ರಂಪ್ ಹೇಳಿಕೆ ಮುಜುಗರ ತರಿಸುವಂತಿದೆ: ಬ್ರಾಡ್ ಶೆರ್ಮನ್ - undefined

ಭಾರತದ ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರ ಸಮಸ್ಯೆಯಲ್ಲಿ ಟ್ರಂಪ್​ರನ್ನು ಮಧ್ಯಸ್ಥಿಕೆ ವಹಿಸುವಂತೆ ಕೇಳಲೇ ಇಲ್ಲ ಎಂದು ಅಮೇರಿಕಾದ ಕಾಂಗ್ರೆಸ್​ ಪಾರ್ಟಿ ಮುಖಂಡ ಬ್ರಾಡ್ ಶೆರ್ಮನ್ ತಿಳಿಸಿದ್ದಾರೆ.

ಬ್ರಾಡ್ ಶೆರ್ಮನ್

By

Published : Jul 23, 2019, 9:03 AM IST

Updated : Jul 23, 2019, 1:59 PM IST

ವಾಷಿಂಗ್ಟನ್​​:ಕಾಶ್ಮೀರ ಸಮಸ್ಯೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​​ರ ಮಧ್ಯಸ್ಥಿಕೆ ಕುರಿತ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಇದೀಗ , ಭಾರತದ ಪ್ರಧಾನಿ ನರೇಂದ್ರ ಮೋದಿ ಟ್ರಂಪ್​ರನ್ನು ಮಧ್ಯಸ್ಥಿಕೆ ವಹಿಸುವಂತೆ ಕೇಳಲೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.

ದಕ್ಷಿಣ ಭಾರತದ ವಿದೇಶಿ ನೀತಿಯ ಬಗ್ಗೆ ಯಾರಿಗೆಲ್ಲ ತಿಳಿದಿದೆಯೋ ಅವರಿಗೆಲ್ಲರಿಗೂ ಕಾಶ್ಮೀರದ ವಿಚಾರದಲ್ಲಿ ಮೂರನೇ ವ್ಯಕ್ತಿ ತಲೆಹಾಕುವುದನ್ನು ಭಾರತ ವಿರೋಧಿಸುತ್ತದೆ ಎಂಬುದು ಗೊತ್ತಿದೆ. ಪಿಎಂ ಮೋದಿ ಇದನ್ನು ಪ್ರಸ್ತಾಪಿಸುವುದಿಲ್ಲ ಎಂಬುದೂ ಪ್ರತಿಯೊಬ್ಬರಿಗೂ ತಿಳಿದಿದೆ. ಹೀಗಾಗಿ ಟ್ರಂಪ್​​ರ ಹೇಳಿಕೆ ಭ್ರಮನಿರಸವಾಗಿದ್ದು, ಮುಜುಗರ ತರಿಸುವಂತಿದೆ ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಕಾಶ್ಮೀರ ಸಮಸ್ಯೆ ಸಂಬಂಧ ದೊಡ್ಡಣ್ಣನ 'ಮಧ್ಯಸ್ಥಿಕೆ' ಹೇಳಿಕೆ ತಳ್ಳಿಹಾಕಿದ ಭಾರತ

ಈಗಾಗಲೇ ಭಾರತದ ವಿದೇಶಾಂಗ ಸಚಿವಾಲಯವು ಪಿಎಂ ಮೋದಿಯೂ ಈ ರೀತಿಯ ಯಾವುದೇ ಮನವಿಯನ್ನು ದೊಡ್ಡಣ್ಣನ ಬಳಿ ಮಾಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಹಾಗೆಯೇ ಕಾಶ್ಮೀರದ ವಿಚಾರದಲ್ಲಿ ಭಾರತದ ನಿರ್ಧಾರ ಎಂದಿಗೂ ಯಥಾಸ್ಥಿತಿಯಲ್ಲಿ ಇರಲಿದೆ ಎಂದು ವಿದೇಶಾಂಗ ವಕ್ತಾರ ರವೀಶ್​ ಕುಮಾರ್​ ಟ್ವೀಟ್​ ಮೂಲಕ ತಿಳಿಸಿದ್ದಾರೆ. ಅಲ್ಲದೇ ಇತ್ತ ನರೇಂದ್ರ ಮೋದಿ ಮಾತ್ರ ಈ ಕುರಿತು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂಬ ಆರೋಪವೂ ಕಾಂಗ್ರೆಸ್​ ಪಾಳಯದಿಂದ ಕೇಳಿಬಂದಿದೆ.

Last Updated : Jul 23, 2019, 1:59 PM IST

For All Latest Updates

TAGGED:

ABOUT THE AUTHOR

...view details