ಕರ್ನಾಟಕ

karnataka

ETV Bharat / international

ರಷ್ಯಾ-ತಾಲಿಬಾನ್ ಪಿತೂರಿಯ ವರದಿಗಳಿಗೆ ಟ್ರಂಪ್ ಪ್ರತಿಕ್ರಿಯೆ ಗಮನಾರ್ಹ: ಜಾನ್ ಬೋಲ್ಟನ್ - ರಷ್ಯಾ ಮತ್ತು ತಾಲಿಬಾನ್ ಸಂಚು

ರಷ್ಯಾ ಮತ್ತು ತಾಲಿಬಾನ್ ಸಂಚು ರೂಪಿಸಿ ಅಫ್ಘಾನಿಸ್ತಾನದಲ್ಲಿ ಯುಎಸ್ ಸೈನಿಕರನ್ನು ಹತ್ಯೆಗೈಯ್ಯಲಾಗಿದೆ ಎಂದು ಗುಪ್ತಚರ ಅಧಿಕಾರಿಗಳು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ತಿಳಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು. ಆದರೆ ಇದನ್ನು ಟ್ರಂಪ್ ನಿರಾಕರಿಸಿದ್ದರು.

boltan
boltan

By

Published : Jun 29, 2020, 9:30 AM IST

ವಾಷಿಂಗ್ಟನ್: ಅಫ್ಘಾನಿಸ್ತಾನದಲ್ಲಿ ಯುಎಸ್ ಸೈನಿಕರನ್ನು ಹತ್ಯೆಗೈದ ಕುರಿತು ರಷ್ಯಾ ಮತ್ತು ತಾಲಿಬಾನ್ ಸಂಚು ರೂಪಿಸಿವೆ ಎಂದು ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಾಕರಿಸಿದ್ದರು.

ಟ್ರಂಪ್ ಈ ವಿಚಾರವನ್ನು ನಿರಾಕರಿಸಿರುವುದು ಗಮನಾರ್ಹವಾಗಿದೆ ಎಂದು ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಜಾನ್ ಬೋಲ್ಟನ್ ಹೇಳಿದ್ದಾರೆ.

"ಟ್ರಂಪ್ ಈ ಕುರಿತು ಏನೂ ಕೇಳಿಲ್ಲವೆಂದು ಹೇಳಿರುವುದು ಬಹಳ ಗಮನಾರ್ಹವಾಗಿದೆ. ಅವರು ಯಾಕೆ ಹೀಗೆ ಮಾಡುತ್ತಿದ್ದಾರೆ?" ಎಂದು ಬೋಲ್ಟನ್ ಪ್ರಶ್ನಿಸಿದ್ದಾರೆ.

ಯುಎಸ್ ಸೈನಿಕರ ಹತ್ಯೆಗೆ ರಷ್ಯಾ ತಾಲಿಬಾನ್​ಗೆ ಕೊಡುಗೆ ನೀಡಿರಬಹುದು ಎಂದು ಆರೋಪಿಸಿ ಗುಪ್ತಚರ ವರದಿಯನ್ನು ಟ್ರಂಪ್​ಗೆ ನೀಡಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಉಲ್ಲೇಖಿಸಿತ್ತು. ಆದರ ಈ ವಿಷಯವನ್ನು ಅಧ್ಯಕ್ಷ ಟ್ರಂಪ್ ನಿರಾಕರಿಸಿದ್ದಾರೆ.

ABOUT THE AUTHOR

...view details