ಕರ್ನಾಟಕ

karnataka

ETV Bharat / international

ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್​ಗೆ ಶುಭ ಹಾರೈಸಿದ ಟ್ರಂಪ್

ಡೆಮಾಕ್ರಟಿಕ್ ಪಕ್ಷದಿಂದ ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರೀಸ್​ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಭಕೋರಿದ್ದಾರೆ.

Trump
ಡೊನಾಲ್ಡ್ ಟ್ರಂಪ್

By

Published : Oct 18, 2020, 4:26 PM IST

ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರೀಸ್ ಅವರಿಗೆ ಕೊರೊನಾ ತಾಕದಿರಲಿ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಶಯ ವ್ಯಕ್ತಪಡಿಸಿದ್ದಾರೆ.

ಕಮಲಾ ಹ್ಯಾರೀಸ್ ಅವರ ಸಹಾಯಕರು ಹಾಗೂ ವಿಮಾನ ಸಿಬ್ಬಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾದ ನಂತರ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯೂ ಆಗಿರುವ ಡೊನಾಲ್ಡ್​ ಈ ರೀತಿಯಲ್ಲಿ ಆಶಿಸಿದ್ದಾರೆ.

ಮಿಚಿಗನ್ ರಾಜ್ಯದ ಮಸ್ಕೆಗಾನ್​ನಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ದ ಹಿಲ್ ಎಂಬುವ ಸುದ್ದಿ ಜಾಲತಾಣ ವರದಿ ಮಾಡಿದೆ.

ತನ್ನ ಸಹಾಯಕರಿಗೆ ಕೊರೊನಾ ಸೋಂಕು ದೃಢಪಟ್ಟ ನಂತರ ಹ್ಯಾರೀಸ್ ತನ್ನ ಚುನಾವಣಾ ರ‍್ಯಾಲಿಯನ್ನು ನಿಲ್ಲಿಸಿದ್ದರು. ಇದಾದ ನಂತರ ಕ್ಯಾಲಿಫೋರ್ನಿಯಾ ಸೆನೆಟರ್ ಹಾಗೂ ಆಕೆಯ ಪತಿ ಕೋವಿಡ್ ಟೆಸ್ಟ್​ ಮಾಡಿಸಿಕೊಂಡಿದ್ದು, ಇಬ್ಬರೂ ಕೂಡಾ ತಮ್ಮ ಸೋಂಕಿನ ವರದಿ ನೆಗೆಟಿವ್ ಬಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಈಗ ಸದ್ಯಕ್ಕೆ ಕಮಲಾ ಹ್ಯಾರಿಸ್ ವಿಶ್ರಾಂತಿಯಲ್ಲಿದ್ದು, ಸೋಮವಾರ ಫ್ಲೋರಿಡಾದ ಜಾಕ್ಸೋನ್​ವಿಲ್ಲೆ ಹಾಗೂ ಓರ್ಲಾಂಡೋದಲ್ಲಿ ನಡೆಯಲಿರುವ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಸ್ಪಷ್ಟನೆ ನೀಡಿದ್ದಾರೆ.

ABOUT THE AUTHOR

...view details