ಕರ್ನಾಟಕ

karnataka

ETV Bharat / international

ವಿಮಾನ ಹೊಡೆದುರುಳಿಸಿದ್ದು ನಾವೇ.. ಇರಾನ್​ಗೆ ಎಚ್ಚರಿಕೆ ನೀಡಿದ ಟ್ರಂಪ್​ - ವಿಮಾನ ಹೊಡೆದುರುಳಿಸಿದ್ದು ನಾವೇ

ಇರಾನ್‌ನ ಧೈರ್ಯಶಾಲಿ ಹಾಗೂ ದೀರ್ಘಕಾಲದಿಂದ ಬಳಲುತ್ತಿರುವ ಜನರ ಜೊತೆ ನಾನಿದ್ದೇನೆ. ನನ್ನ ಆಡಳಿತವು ನಿಮ್ಮೊಂದಿಗೆ ಸದಾ ಇರುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಟ್ರಂಪ್​ ಇರಾನ್ ಪ್ರಜೆಗಳ ಕುರಿತು ಟ್ವೀಟ್ ಮಾಡಿದ್ದಾರೆ.

ಇರಾನ್​ಗೆ ಎಚ್ಚರಿಕೆ ನೀಡಿದ ಟ್ರಂಪ್​ , Trump warns Iran against
ಇರಾನ್​ಗೆ ಎಚ್ಚರಿಕೆ ನೀಡಿದ ಟ್ರಂಪ್​

By

Published : Jan 12, 2020, 10:31 AM IST

Updated : Jan 12, 2020, 11:49 AM IST

ವಾಷಿಂಗ್​ಟನ್​:ವಿಮಾನ ಹೊಡೆದುರುಳಿಸಿದ್ದು ನಾವೇ ಎಂದು ತಪ್ಪೊಪ್ಪಿಕೊಂಡ ಇರಾನ್​ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಎಚ್ಚರಿಕೆ ನೀಡಿದ್ದಾರೆ.

ವಿಮಾನವನ್ನು ಗುಂಡು ಹಾರಿಸಿ ಪತನ ಮಾಡಲಾಗಿದೆ ಎಂದು ಇರಾನ್ ಒಪ್ಪಿಕೊಂಡ ನಂತರ ಅಲ್ಲಿನ ಪ್ರತಿಭಟನಾಕಾರರು ಭುಗಿಲೆದ್ದಿದ್ದಾರೆ. ಈ ಸಂಬಂಧ ಕೈಗೊಳ್ಳುವ ಇರಾನ್ ಕ್ರಮವನ್ನು ಅಮೆರಿಕ ಸೂಕ್ಷ್ಮವಾಗಿ ಗಮನಿಸುತ್ತದೆ ಎಂದು ಇರಾನ್​ಗೆ ಟ್ರಂಪ್​ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಟ್ರಂಪ್, ಇರಾನ್‌ನ ಧೈರ್ಯಶಾಲಿ ಹಾಗೂ ದೀರ್ಘಕಾಲದಿಂದ ಬಳಲುತ್ತಿರುವ ಜನರ ಜೊತೆ ನಾನಿದ್ದೇನೆ. ನಾನು ಅಧ್ಯಕ್ಷನಾದ ಆರಂಭದಿಂದಲೂ ನಿಮ್ಮ ಜತೆಗಿರುವೆ. ನನ್ನ ಆಡಳಿತವು ನಿಮ್ಮೊಂದಿಗೆ ನಿಲ್ಲುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಟೆಹರಾನ್​ ಪ್ರದೇಶದಲ್ಲಿ ಇರಾನ್​ ಉಕ್ರೇನಿಯನ್ ಜೆಟ್‌ಲೈನರ್‌ನ ಉದ್ದೇಶಪೂರ್ವಕವಾಗಿ ಹೊಡೆದುರುಳಿಸಿದೆ. ಇದರಲ್ಲಿದ್ದ ಎಲ್ಲ 176 ಜನರು ಆ ವೇಳೆ ಸಾವನ್ನಪ್ಪಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಇರಾನ್​ ಅಧ್ಯಕ್ಷ, ಇದು ಅಚಾತುರ್ಯದಿಂದ ಆದಂತಹ ದೋಷ. ಅಷ್ಟೇ ಅಲ್ಲ, ಕ್ಷಮಿಸಲಾಗದ ತಪ್ಪು ಎಂದು ಹೇಳಿದ್ದರು.

Last Updated : Jan 12, 2020, 11:49 AM IST

ABOUT THE AUTHOR

...view details