ವಾಷಿಂಗ್ಟನ್: ಕೊರೊನಾ ವೈರಸ್ ಕಾರಣದಿಂದಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಅಮೆರಿಕನ್ನರಿಗೆ ನೀಡಲಾಗುವ ಚೆಕ್ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರನ್ನು ಮುದ್ರಿಸಲು ಖಜಾನೆ ಇಲಾಖೆ ಆದೇಶಿಸಿದೆ.
ಬ್ಯಾಡ್ ಟೈಮಲ್ಲೂ ಪ್ರಚಾರಕ್ಕಿಳಿದ್ರಾ ಟ್ರಂಪ್?... ಕೋವಿಡ್ ಪರಿಹಾರ ಚೆಕ್ನಲ್ಲಿ ಅಧ್ಯಕ್ಷರ ಹೆಸರು ಮುದ್ರಿಸಲು ಆದೇಶ - ಕೋವಿಡ್ ಪರಿಹಾರ ಚೆಕ್ನಲ್ಲಿ ಟ್ರಂಪ್ ಹೆಸರು
ಆರ್ಥಿಕ ಸಂಕಷ್ಟದಲ್ಲಿರುವಮೂ ಅಮೆರಿಕನ್ನರಿಗೆ ವಿತರಿಸಲಾಗುವ ಚೆಕ್ಗಳಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರು ನಮೂದಿಸಲು ಅಮೆರಿಕ ಖಜಾನೆ ಇಲಾಖೆ ಆದೇಶಿಸಿದೆ.

Trump wants his name on all COVID-19 relief checks to Americans
ಸೋಮವಾರ ತಡರಾತ್ರಿ ಈ ಬಗ್ಗೆ ಆದೇಶ ಹೊರಡಿಸಿರುವ ಖಜಾನೆ ಇಲಾಖೆ, ಆತಂರಿಕ ಕಂದಾಯ ಸೇವೆ (ಐಆರ್ಎಸ್) ಮುಖಾಂತರ 70 ಮಿಲಿಯನ್ ಅಮೆರಿನ್ನರಿಗೆ 1,200 ಯುಎಸ್ ಡಾಲರ್ ಮೌಲ್ಯದ ಚೆಕ್ ವಿತರಿಸಲು ಮುಂದಾಗಿದೆ. ಹೀಗೆ ಕಳುಹಿಸುವ ಎಲ್ಲಾ ಚೆಕ್ಗಳನ್ನು ತೆರೆಯುವಾಗ ಅದರ ಎಡ ಭಾಗದಲ್ಲಿ ಡೊನಾಲ್ಡ್ ಜೆ. ಟ್ರಂಪ್ ಎಂದು ಅಧ್ಯಕ್ಷರ ಹೆಸರು ಕಾಣಬೇಕು ಎಂದು ಹೇಳಿರುವುದಾಗಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಐಆರ್ಎಸ್ ಈ ಮೊದಲು ಹಲವು ಬಾರಿ ಈ ರೀತಿಯ ಚೆಕ್ಗಳನ್ನು ವಿತರಿಸಿದೆ. ಆದರೆ, ಚೆಕ್ನಲ್ಲಿ ಅಧ್ಯಕ್ಷರ ಹೆಸರು ನಮೂದಿಸಲು ಆದೇಶಿಸಿರುವುದು ಇದೇ ಮೊಲದ ಬಾರಿಯಾಗಿದೆ.