ಕರ್ನಾಟಕ

karnataka

ETV Bharat / international

ಒಲ್ಲದ ಮನಸ್ಸಿನಿಂದ ಸೋಲೊಪ್ಪಿಕೊಂಡ ಟ್ರಂಪ್​: ಬೈಡನ್​ಗೆ ಅಧಿಕಾರ ಹಸ್ತಾಂತರಕ್ಕೆ ಗ್ರೀನ್​ ಸಿಗ್ನಲ್​! - ಡೆಮೊಕ್ರಾಟ್ ಅಧಿಕಾರ ಸ್ವೀಕಾರ

ಅಮೆರಿಕದ 46ನೇ ಅಧ್ಯಕ್ಷರಾಗಲು ಜೋ ಬೈಡನ್ ಅವರ ಅಧಿಕಾರ ಹಸ್ತಾಂತರಕ್ಕೆ ಸಹಕರಿಸುವಂತೆ ಜನರಲ್ ಸರ್ವೀಸಸ್ ಅಡ್ಮಿನಿಸ್ಟ್ರೇಷನ್ ಮುಖ್ಯಸ್ಥ ಎಮಿಲಿ ಮರ್ಫಿಯನ್ನು ಸೋಮವಾರ ಸಂಜೆ ಟ್ವಿಟರ್​ ಮುಖಾಂತರ ಟ್ರಂಪ್ ಅವರಿಗೆ ಮನವಿ ಮಾಡಿದ್ದರು.

Trump- Biden
ಟ್ರಂಪ್ ಬೈಡನ್

By

Published : Nov 24, 2020, 11:24 AM IST

Updated : Nov 24, 2020, 1:31 PM IST

ನ್ಯೂಯಾರ್ಕ್:ಡೆಮಾಕ್ರಟಿಕ್​ ಪಕ್ಷದ ಚುನಾಯಿತ ಅಧ್ಯಕ್ಷ ಜೋ ಬೈಡನ್​ಗೆ ಆಡಳಿತ ವರ್ಗಾವಣೆ ಪರಿವರ್ತನೆ ಪ್ರಾರಂಭಿಸಲು ಡೊನಾಲ್ಡ್ ಟ್ರಂಪ್ ಕೊನೆಗೂ ಒಲ್ಲದ ಮನಸ್ಸಿನಿಂದ ಸಹಮತ ವ್ಯಕ್ತಪಡಿಸಿದ್ದಾರೆ.

ಅಮೆರಿಕದ 46ನೇ ಅಧ್ಯಕ್ಷರಾಗಲು ಜೋ ಬೈಡನ್ ಅವರ ಅಧಿಕಾರ ಹಸ್ತಾಂತರಕ್ಕೆ ಸಹಕರಿಸುವಂತೆ ಜನರಲ್ ಸರ್ವೀಸಸ್ ಅಡ್ಮಿನಿಸ್ಟ್ರೇಷನ್ ಮುಖ್ಯಸ್ಥ ಎಮಿಲಿ ಮರ್ಫಿಯನ್ನು ಸೋಮವಾರ ಸಂಜೆ ಟ್ವಿಟರ್​ ಮುಖಾಂತರ ಟ್ರಂಪ್ ಅವರಿಗೆ ಮನವಿ ಮಾಡಿದ್ದರು.

'ಟ್ರೀಟಿ ಆಫ್ ಓಪನ್ ಸ್ಕೈಸ್'​​ನಿಂದ ಹೊರ ಬರುವುದಾಗಿ ಘೋಷಿಸಿದ ಯುಎಸ್​

ಮಾಧ್ಯಮಗಳು ಬೈಡನ್ ಅವರನ್ನು ಚುನಾವಣೆಯ ವಿಜೇತರೆಂದು ಘೋಷಿಸಿದ 16 ದಿನಗಳ ನಂತರ ಈ ಘೋಷಣೆ ಹೊರಬಿದ್ದಿದೆ. ಆದರೆ ಟ್ರಂಪ್ ಇನ್ನೂ ಮತದಾನ ಎಣಿಕೆಯನ್ನು ಉಲ್ಲೇಖಿಸಿ ತಾವು ಸೋತವರೆಂದು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ.

ಜಿಎಸ್ಎಯಲ್ಲಿ ಎಮಿಲಿ ಮರ್ಫಿ ಅವರ ಸಮರ್ಪಣೆ ಮತ್ತು ದೇಶದ ನಿಷ್ಠೆಗಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಆಕೆಗೆ ಕಿರುಕುಳ, ಬೆದರಿಕೆ ಮತ್ತು ನಿಂದಿಸಲಾಗಿದೆ. ಅವಳ, ಅವಳ ಕುಟುಂಬಸ್ಥರು ಮತ್ತು ಜಿಎಸ್ಎ ಉದ್ಯೋಗಿಗಳ ಮೇಲಿನ ಇಂತಹ ಕೃತ್ಯವನ್ನು ನೋಡಲು ನಾನು ಬಯಸುವುದಿಲ್ಲ. ನಮ್ಮ ಪ್ರಕರಣವು ದೃಢವಾಗಿ ಮುಂದುವರಿಯುತ್ತದೆ. ನಾವು ಒಳ್ಳೆಯದನ್ನು ಮುಂದುವರಿಸುತ್ತೇವೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

ನಮ್ಮ ಹೋರಾಟದಲ್ಲಿಮತ್ತು ನಾವು ಮೇಲುಗೈ ಸಾಧಿಸುತ್ತೇವೆ ಎಂದು ನಾನು ನಂಬುತ್ತೇನೆ. ಅದೇನೇ ಇದ್ದರೂ ನಮ್ಮ ದೇಶದ ಹಿತದೃಷ್ಟಿಯಿಂದ ಎಮಿಲಿ ಮತ್ತು ಅವರ ತಂಡವು ಆರಂಭಿಕ ಪ್ರೋಟೋಕಾಲ್‌ಗಳಿಗೆ ಸಂಬಂಧಿಸಿದಂತೆ ಮಾಡಬೇಕಾದದ್ದನ್ನು ಮುಂದುವರಿಸಬೇಕೆಂದು ನಾನು ಶಿಫಾರಸು ಮಾಡುತ್ತಿದ್ದೇನೆ. ನನ್ನ ತಂಡಕ್ಕೂ ಕೂಡ ಅದೇ ರೀತಿ ಮಾಡಲು ಹೇಳಿದ್ದೇನೆ ಎಂದು ಮತ್ತೊಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

Last Updated : Nov 24, 2020, 1:31 PM IST

ABOUT THE AUTHOR

...view details