ಕರ್ನಾಟಕ

karnataka

ETV Bharat / international

ಮೆಕ್ಸಿಕೋ ಮೇಲೆ ದೊಡ್ಡಣ್ಣನ ಸವಾರಿ: ಆ ದೇಶದ ಮೇಲೆ ಟ್ರಂಪ್​ ಮಾಡಿರುವ ಪ್ರಹಾರ ಎಂಥದ್ದು? - undefined

ಮೆಕ್ಸಿಕೋದಿಂದ ಬರುವ ವಲಸಿರ ಮೇಲೆ ಸಮರ ಸಾರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮೆಕ್ಸಿಕೋದಿಂದ ಆಮದಾಗುವ ವಸ್ತುಗಳ ಮೇಲೆ ಶೇ 5 ರಷ್ಟು ಸುಂಕ ಹೆಚ್ಚಳ ಮಾಡುವ ಬೆದರಿಕೆ ಹಾಕಿದ್ದಾರೆ.

ಮೆಕ್ಸಿಕೋ ಮೇಲೆ ದೊಡ್ಡಣ್ಣ ಸವಾರಿ

By

Published : Jun 1, 2019, 8:12 AM IST

ಅಮೆರಿಕ: ಮೆಕ್ಸಿಕೋ ದೇಶದಿಂದ ಆಮದಾಗುವ ಎಲ್ಲ ವಸ್ತುಗಳ ಮೇಲೆ ಶೆಕಡ 5 ರಷ್ಟು ಸುಂಕ ಹೆಚ್ಚಳ ಮಾಡಬೇಕೆಂದಿರುವ ನಿರ್ಣಯವನ್ನಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸಮರ್ಥಿಸಿಕೊಂಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆಯಷ್ಟೆ ಮೆಕ್ಸಿಕೋದಿಂದ ಆಮದಾಗುವ ಎಲ್ಲ ರೀತಿಯ ವಸ್ತುಗಳ ಮೇಲೆ ಶೇಕಡ 5 ರಷ್ಟು ಸುಂಕ ಹೆಚ್ಚಳ ಮಾಡಲು ಅಮೆರಿಕ ನಿರ್ಧಾರಮಾಡಿತ್ತು. ಜೂನ್​ 10 ರಿಂದಲೇ ಈ ನಿಯಮ ಜಾರಿಯಾಗಲಿದೆ ಎಂದು ತಿಳಿಸಿತ್ತು.

ಅಮೆರಿಕದ ವಲಸೆ ಕಾನೂನು, ಪ್ರಜಾಪ್ರಭುತ್ವವಾದಿಗಳು ಮತ್ತು ಮೆಕ್ಸಿಕೋ ವಿರುದ್ಧ ಚಾಟಿ ಬೀಸಿರುವ ಟ್ರಂಪ್​, ಇವರಿಂದಲೇ ಅಮೆರಿಕದಲ್ಲಿ ಡ್ರಗ್ಸ್​ ಸೇವನೆ ಮತ್ತು ಅಪರಾಧ ಪ್ರಕರಣಗಳು ಹೆಚ್ಚಾಗಿವೆ ಎಂದು ಟ್ವಿಟ್ಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಮೆರಿಕ ಸಂಯುಕ್ತ ಸಂಸ್ಥಾನದ ವಲಸೆ ಕಾನೂನಲ್ಲಿ ಕೆಲವು ನ್ಯೂನತೆ ಇರುವುದರಿಂದ ಅದರ ಪ್ರಯೋಜನ ಪಡೆದ ಮೆಕ್ಸಿಕೋ ಹಲವು ದಶಕಗಳಿಂದ ನಮ್ಮ ದೇಶದಲ್ಲಿ ತೊಂದರೆಗಳನ್ನ ಸೃಷ್ಟಿ ಮಾಡುತ್ತಿದೆ. ಆದರೆ, ಅದನ್ನೆಲ್ಲ ಸರಿ ಪಡಿಸುವ ಕಾಲ ಈಗ ಬಂದಿದೆ ಎಂದು ಟ್ವೀಟ್​ ಮಾಡಿದ್ದಾರೆ.

ಅಮೇರಿಕಗೆ ಬರುವ ವಲಸಿಗರಿಗೆ ನಿರ್ಬಂಧ ಹೇರುವವವರೆಗೂ ಮೆಕ್ಸಿಕೋ ಮೇಲೆ ಏರಿರುವ ಸುಂಕವನ್ನ ಹೆಚ್ಚಳ ಮಾಡಲಾಗುವುದು ಎಂದು ಅಮೆರಿಕ ಹೇಳಿದೆ. ಜೂನ್​ 10ಕ್ಕೆ ಶೇಕಡ 5ರಷ್ಟು ಸುಂಕ ನೀಡಬೇಕು. ಜುಲೈಗೆ 10 ರಷ್ಟು ಸುಂಕ ಹೆಚ್ಚಳವಾಗುತ್ತದೆ. ಆಗಸ್ಟ್​ಗೆ 15, ಸೆಪ್ಟೆಂಬರ್​ಗೆ 20 ಮತ್ತು ಅಕ್ಟೋಬರ್​ಗೆ 25 ರಷ್ಟು ಸುಂಕ ಹೆಚ್ಚಳ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಅಮೆರಿಕಕ್ಕೆ ಬರುವ 90 ರಷ್ಟು ಡ್ರಗ್ಸ್​ ಮೆಕ್ಸಿಕೋ ದೇಶದಿಂದ ನಮ್ಮ ದಕ್ಷಿಣ ಭಾಗದ ಗಡಿಗೆ ಬರುತ್ತವೆ. ಇದರಿಂದ ಕಳೆದ ವರ್ಷ 80 ಸಾವಿರ ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. 10 ಲಕ್ಷ ಜನರ ಜೀವನ ಹಾಳಾಗಿದೆ. ಹಲವು ವರ್ಷಗಳಿಂದ ನಡೆದುಕೊಂಡು ಬಂದಿದ್ದರೂ ಏನೂ ಮಾಡಲಾಗಿಲ್ಲ, ಆದರೆ ಅದಕ್ಕೆಲ್ಲ ಈಗ ಸಮಯ ಕೂಡಿಬಂದಿದೆ ಎಂದು ಟ್ರಂಪ್​ ಟ್ವಿಟ್ಟರ್​ನಲ್ಲಿ ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details