ವಾಷಿಂಗ್ಟನ್:ಇತ್ತೀಚೆಗೆ ಗುಣಮುಖರಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕೊರೊನಾ ಸೋಂಕು ಪರೀಕ್ಷೆ ಮಾಡಲಾಗಿದ್ದು, ವರದಿ ಮತ್ತೊಮ್ಮೆ ನೆಗೆಟಿವ್ ಬಂದಿದೆ ಎಂದು ಶ್ವೇತ ಭವನದ ವೈದ್ಯರು ಘೋಷಣೆ ಮಾಡಿದ್ದಾರೆ.
ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಫ್ಲೋರಿಡಾದಲ್ಲಿ ಪ್ರಚಾರ ಸಮಾವೇಶ ಇರುವ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ಗೆ ಸತತವಾಗಿ ಕೊರೊನಾ ಸೋಂಕು ಪರೀಕ್ಷೆ ಮಾಡಲಾಗುತ್ತಿದ್ದು, ಅವರ ವರದಿ ನೆಗೆಟಿವ್ ಬರುತ್ತಿದೆ ಎಂದು ಮಾಧ್ಯಮ ಕಾರ್ಯದರ್ಶಿಗೆ ವೈದ್ಯ ಸಿಯಾನ್ ಕೋನ್ಲೆ ಪತ್ರ ಬರೆದಿದ್ದಾರೆ.
ಅಬ್ಬೋಟ್ನ ಬಿಂಜಾಕ್ಸ್ನೌ ಎಂಬ ಆ್ಯಂಟಿಜೆನ್ ಕಾರ್ಡ್ ಮೂಲಕ ಪರೀಕ್ಷೆ ನಡೆಸಲಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಮೆಲಾನಿಯಾ ಟ್ರಂಪ್ಗೆ ಅಕ್ಟೋಬರ್ 2ರಂದು ಕೊರೊನಾ ಸೋಂಕು ತಗುಲಿರುವುದು ದೃಢವಾಗಿತ್ತು.
ವಾಲ್ಟರ್ ರೀಡ್ ವೈದ್ಯಕೀಯ ಕೇಂದ್ರದಿಂದ ಡಿಸ್ಚಾರ್ಜ್ ಆಗಿ ಬಂದು ಐದು ದಿನಗಳ ಬಳಿಕವೂ ಟ್ರಂಪ್ರ ಕೋವಿಡ್ ವರದಿ ನೆಗೆಟಿವ್ ಬಂದಿದೆಯೇ, ಇಲ್ಲವೇ ಎಂಬುದರ ಕುರಿತು ಮಾಹಿತಿ ಬಹಿರಂಗಪಡಿಸಲು ಶ್ವೇತಭವನದ ಅಧಿಕಾರಿಗಳು ನಿರಾಕರಿಸಿದ್ದರಿಂದ ಅವರ ಆರೋಗ್ಯ ಸ್ಥಿತಿ ನಿಗೂಢವಾಗಿತ್ತು. ಈಗ ಅವರ ಆರೋಗ್ಯ ವರದಿಯ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.