ಕರ್ನಾಟಕ

karnataka

ETV Bharat / international

ಎರಡನೇ ಬಾರಿಯೂ ಡೊನಾಲ್ಡ್​ ಟ್ರಂಪ್​​ ಕೊರೊನಾ ಪರೀಕ್ಷೆ ವರದಿ ನೆಗೆಟಿವ್ - ಕೊರೊನಾ

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಎರಡನೇ ಬಾರಿ ಕೊರೊನಾ ಸೋಂಕಿನ ಪರೀಕ್ಷೆ ಮಾಡಲಾಗಿದೆ. ಎರಡೂ ಬಾರಿಯೂ ಸೋಂಕಿನ ಪರೀಕ್ಷಾ ವರದಿಯಲ್ಲಿ ನೆಗಟಿವ್ ಬಂದಿದೆ.

ಡೊನಾಲ್ಡ್​ ಟ್ರಂಪ್
donald trump

By

Published : Apr 3, 2020, 10:42 AM IST

ವಾಷಿಂಗ್ಟನ್​(ಅಮೆರಿಕ): ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಎರಡನೇ ಬಾರಿ ಕೊರೊನಾ ಸೋಂಕಿನ ಪರೀಕ್ಷೆ ನಡೆದಿದ್ದು ಎರಡನೇ ಬಾರಿಯೂ ವರದಿಯಲ್ಲಿ ಕೊರೊನಾ ನೆಗೆಟಿವ್​ ಬಂದಿದೆ ಎಂದು ಶ್ವೇತಭವನದ ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಮಾತಾನಡಿದ ಶ್ವೇತಭವನದ ವೈದ್ಯ ಸಿಯಾನ್​ ಕೋನ್ಲಿ ಡೋನಾಲ್ಡ್​​ ಟ್ರಂಪ್​ಗೆ ಸೋಂಕಿನ ಪರೀಕ್ಷೆ ಮಾಡಿದ್ದು ಅವರ ಆರೋಗ್ಯವಾಗಿದ್ದಾರೆ. 15 ನಿಮಿಷಗಳಲ್ಲಿ ಸೋಂಕು ಪರೀಕ್ಷೆಯ ವರದಿ ಬಂದಿದ್ದು ನೆಗೆಟಿವ್ ಬಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ವೇಳೆ ಡೊನಾಲ್ಡ್​ ಟ್ರಂಪ್​ '' ಕೊರೊನಾ ನೆಗೆಟಿವ್ ಬಂದಿದ್ದು, ಈ ಮೊದಲೂ ಸೋಂಕು ಪರೀಕ್ಷೆ ಮಾಡಿಸಿದಾಗ ನೆಗೆಟಿವ್​ ಬಂದಿತ್ತು ಈ ಬಗ್ಗೆ ಖುಷಿಯಾಗಿದ್ದೇನೆ'' ಎಂದಿದ್ದಾರೆ.

ಈ ಮೊದಲು ಡೊನಾಲ್ಡ್​ ಟ್ರಂಪ್​ಗೆ ಮಾರ್ಚ್​ ತಿಂಗಳ ಮಧ್ಯಭಾಗದಲ್ಲಿ ಕೊರೊನಾ ಸೋಂಕಿನ ಪರೀಕ್ಷೆ ನಡೆದಿತ್ತು. ಈಗ ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣದಿಂದ ಮತ್ತೆ ಪರೀಕ್ಷೆ ಮಾಡಲಾಗಿದೆ. ಈಗ ಸುಮಾರು 10 ಲಕ್ಷ ಕೊರೊನಾ ಸೋಂಕಿತರು ವಿಶ್ವದಲ್ಲಿದ್ದು 51 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ABOUT THE AUTHOR

...view details