ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ದಿನ ಡೊನಾಲ್ಡ್ ಟ್ರಂಪ್ ಪುತ್ರ, ಭಾರತದ ನಕ್ಷೆಯನ್ನು ತಪ್ಪಾಗಿ ತೋರಿಸಿ ಪೆದ್ದತನ ಪ್ರದರ್ಶಿಸಿದ್ದಾರೆ.
ಟ್ರಂಪ್ ಪುತ್ರ ಟ್ವೀಟರ್ನಲ್ಲಿ ಪೋಸ್ಟ್ ಮಾಡಿರುವ ವಿಶ್ವದ ನಕ್ಷೆಯಲ್ಲಿ ಭಾರತದಲ್ಲಿ ಜಮ್ಮು ಕಾಶ್ಮೀರವಿಲ್ಲ. ಜಮ್ಮು ಕಾಶ್ಮೀರವು ಪಾಕಿಸ್ತಾನದ ಭಾಗ ಎಂಬಂತೆ ತೋರಿಸಿ ಅಚಾತುರ್ಯ ಮೆರೆದಿದ್ದಾರೆ.
ಟ್ರಂಪ್ ಪುತ್ರನ ಪ್ರಪಂಚದ ನಕ್ಷೆ ಬಹುಪಾಲು ಕೆಂಪು ಬಣ್ಣದಿಂದ ತುಂಬಿದ್ದು, ರಿಪಬ್ಲಿಕನ್ ಪಕ್ಷದ ಬಣ್ಣ ಕೂಡ ಕೆಂಪು. ಈ ಹಿನ್ನೆಲೆ ತಮ್ಮ ತಂದೆ ಚುನಾವಣೆಯಲ್ಲಿ ಗೆಲ್ಲಲಿದ್ದಾರೆ ಎಂಬ ಭರವಸೆಯಲ್ಲಿದ್ದಾರೆ.
ಆದ್ರೆ ನಕ್ಷೆಯಲ್ಲಿ ಭಾರತದ ಬಣ್ಣ ನೀಲಿ ಆಗಿದ್ದು, ಬಿಡೆನ್ಗೆ ಬೆಂಬಲ ನೀಡಲಿದೆ ಅನ್ನುವ ಹಾಗೇ ತೋರಿಸಿದ್ದಾರೆ. ಆದ್ರೆ ಭಾರತದ ಜಮ್ಮು ಕಾಶ್ಮೀರವನ್ನು ಕೆಂಪು ಬಣ್ಣದಲ್ಲಿ ತೋರಿಸಿ, ಟ್ರಂಪ್ಗೆ ಬೆಂಬಲ ನೀಡಲಿದೆ ಎನ್ನುವ ಹಾಗೆ ಬಿಂಬಿಸಲಾಗಿದೆ.