ವಾಷಿಂಗ್ಟನ್(ಅಮೆರಿಕ): ಉತ್ತರ ಕೆರೊಲಿನಾದಲ್ಲಿ ಮೇಲ್-ಇನ್ ಮತಪತ್ರಗಳನ್ನು ಸ್ವೀಕರಿಸಲು ಆರು ದಿನಗಳ ಗಡುವು ವಿಸ್ತರಿಸಲು ಅನುಮತಿ ನೀಡುವ ಅಮೆರಿಕದ ಸುಪ್ರೀಂಕೋರ್ಟ್ ತೀರ್ಪನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಂಡಿಸಿದ್ದಾರೆ.
"ಈ ನಿರ್ಧಾರವು ನಮ್ಮ ದೇಶಕ್ಕೆ ತುಂಬಾ ಕೆಟ್ಟದ್ದಾಗಿದೆ. ಆ ಒಂಬತ್ತು ದಿನಗಳಲ್ಲಿ ಏನಾಗಬಹುದು ಎಂದು ನೀವು ಊಹಿಸಬಲ್ಲಿರಾ? ಚುನಾವಣೆ ನವೆಂಬರ್ ಮೂರರಂದೇ ಕೊನೆಗೊಳ್ಳಬೇಕು" ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಆರು ದಿನಗಳ ಗಡುವು ವಿಸ್ತರಣೆಯನ್ನು ತಡೆಯುವ ರಿಪಬ್ಲಿಕನ್ ಪಕ್ಷದ ಮೊದಲ ಪ್ರಯತ್ನವನ್ನು ಕೋರ್ಟ್ ಬುಧವಾರ ತಿರಸ್ಕರಿಸಿತ್ತು.
ಡೆಮಾಕ್ರೆಟ್ಸ್, ಮೇಲ್ ಮೂಲಕ ಮತ ಚಲಾಯಿಸಲು ಜನರನ್ನು ಪ್ರೋತ್ಸಾಹಿಸುತ್ತಿದ್ದಾರೆ ಮತ್ತು ಆ ಮತಪತ್ರಗಳನ್ನು ಸ್ವೀಕರಿಸಲು ಗಡುವನ್ನು ವಿಸ್ತರಿಸುವುದು ಚುನಾವಣಾ ವಂಚನೆಗೆ ಕಾರಣವಾಗಬಹುದು ಎಂದು ಟ್ರಂಪ್ ಪದೇ ಪದೆ ಎಚ್ಚರಿಸಿದ್ದಾರೆ.
ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡೆನ್, ಇತ್ತೀಚಿನ ಸಮೀಕ್ಷೆಗಳ ಪ್ರಕಾರ, ಉತ್ತರ ಕೆರೊಲಿನಾದಲ್ಲಿ ಶೇ 0.7 ರಷ್ಟು ಮುನ್ನಡೆ ಸಾಧಿಸಿದ್ದಾರೆ.