ಕರ್ನಾಟಕ

karnataka

ಆರ್ಥಿಕ ಉತ್ತೇಜನಕ್ಕಾಗಿ 2.2 ಟ್ರಿಲಿಯನ್​ ಡಾಲರ್​ ಪ್ಯಾಕೇಜ್​ಗೆ ಟ್ರಂಪ್​ ಸಹಿ

ಕೊವಿಡ್​ ದಾಳಿಯಿಂದ ಕಂಗೆಟ್ಟಿರುವ ಅಮೆರಿಕ ತನ್ನ ಆರ್ಥಿಕ ಸ್ಥಿತಿ ಸುಧಾರಣೆಗೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ತಕ್ಷಣ ಆರ್ಥಿಕ ಪರಿಸ್ಥಿತಿ ಉತ್ತೇಜನಕ್ಕಾಗಿ ಟ್ರಂಪ್​ 2.2 ಟ್ರಿಲಿಯನ್​ ಡಾಲರ್ ಮೊತ್ತದ ಆರ್ಥಿಕ ಉತ್ತೇಜನ ಪ್ಯಾಕೇಜ್​ಗೆ ಸಹಿ ಮಾಡಿದ್ದಾರೆ.

By

Published : Mar 28, 2020, 2:27 PM IST

Published : Mar 28, 2020, 2:27 PM IST

Trump signs USD 2.2T stimulus, Washington
Trump signs USD 2.2T stimulus

ವಾಷಿಂಗ್ಟನ್: ಕೋವಿಡ್​-19ನಿಂದಾಗಿ ಹಿಂದೆಂದೂ ಕಂಡರಿಯದ ಬಿಕ್ಕಟ್ಟಿಗೆ ಸಿಲುಕಿರುವ ಅಮೆರಿಕದ ಆರ್ಥಿಕ ಪರಿಸ್ಥಿತಿಯನ್ನು ಮತ್ತೆ ಹಳಿಗೆ ತರಲು 2.2 ಟ್ರಿಲಿಯನ್​ ಡಾಲರ್​ ಆರ್ಥಿಕ ಉತ್ತೇಜನ ಪ್ಯಾಕೇಜ್​ಗೆ ಅಧ್ಯಕ್ಷ ಟ್ರಂಪ್​ ಸಹಿ ಹಾಕಿದ್ದಾರೆ.

ದೇಶದ ಉದ್ಯಮ ವಲಯದ ಹಿತ ಕಾಪಾಡಲು, ವೈದ್ಯಕೀಯ ಸೇವೆಗಳ ಬಲವರ್ಧನೆಗೆ ಹಾಗೂ ಕೊರೊನಾದಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳಿಗೆ ಸಹಾಯ ಮಾಡಲು ಈ ಪ್ಯಾಕೇಜ್​ ನೀಡಲಾಗಿದೆ. ಪ್ಯಾಕೇಜ್ ಜಾರಿಗೆ ಅಮೆರಿಕ ಸಂಸತ್ ಬಹುತೇಕ ಸರ್ವಾನುಮತದ ಅನುಮೋದನೆ ನೀಡಿತ್ತು.

ಕೊರೊನಾ ವೈರಸ್​ ತಡೆಯಲು ದೇಶಾದ್ಯಂತ ಘೋಷಿಸಲಾದ ಲಾಕ್​ಡೌನ್​ನಿಂದಾಗಿ ಅಮೆರಿಕದ ಅರ್ಥ ವ್ಯವಸ್ಥೆ ಹಿಂಜರಿತ ಕಾಣುತ್ತಿದೆ. ಉದ್ಯಮಗಳು, ಶಾಲಾ-ಕಾಲೇಜುಗಳು ಮುಚ್ಚಿದ್ದರಿಂದ ಬಹುತೇಕ ಅಮೆರಿಕ ಸ್ತಬ್ಧವಾಗಿದೆ.

'ಈ ಪ್ಯಾಕೇಜ್​ನಿಂದ ತುರ್ತಾಗಿ ಅಗತ್ಯವಿರುವ ಸಹಾಯ ಸಿಗಲಿದೆ' ಎಂದು ಸಹಿ ಹಾಕಿದ ನಂತರ ಓವಲ್​ ಕಚೇರಿಯಲ್ಲಿ ಟ್ರಂಪ್ ಹೇಳಿದರು. ಪ್ಯಾಕೇಜ್​ ಬಿಲ್​ಗೆ ಅನುಮೋದನೆ ನೀಡಿದ್ದಕ್ಕಾಗಿ ಎರಡೂ ಪಕ್ಷಗಳ ಸದಸ್ಯರನ್ನು ಟ್ರಂಪ್​ ಇದೇ ಸಂದರ್ಭದಲ್ಲಿ ಅಭಿನಂದಿಸಿದರು.

2.2 ಟ್ರಿಲಿಯನ್ ಡಾಲರ್​ ಮೊತ್ತದ ಈ ಪ್ಯಾಕೇಜ್ ಜಾರಿಯಿಂದ ಅನೇಕ ಅಮೆರಿಕನ್ನರಿಗೆ ಸರ್ಕಾರದಿಂದ 1,200 ಡಾಲರ್​ ವರ್ಗಾಯಿಸುವ ಪ್ರಕ್ರಿಯೆ ಸುಲಭವಾಗಲಿದೆ. ಕೆಲಸ ಕಳೆದುಕೊಂಡವರಿಗೆ ಹಣಕಾಸು ಸಹಾಯ ಸಿಗಲಿದೆ. ಅಲ್ಲದೆ ಚಿಕ್ಕ ಹಾಗೂ ದೊಡ್ಡ ಉದ್ಯಮಗಳಿಗೆ ಹೊಸ ಸಾಲ ಹಾಗೂ ತೆರಿಗೆ ವಿನಾಯಿತಿ ಸೌಲಭ್ಯ ದೊರಕಲಿವೆ.

ABOUT THE AUTHOR

...view details