ವಾಷಿಂಗ್ಟನ್(ಅಮೆರಿಕ):ದೇಶದ ಸ್ಮಾರಕಗಳು ಮತ್ತು ಪ್ರತಿಮೆಗಳನ್ನು ವಿಧ್ವಂಸಕ ಕೃತ್ಯಗಳಿಂದ ರಕ್ಷಿಸುವ ಉದ್ದೇಶದಿಂದ ಅತ್ಯಂತ ಬಲವಾದ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
"ಅಮೆರಿಕದ ಸ್ಮಾರಕಗಳು ಮತ್ತು ಪ್ರತಿಮೆಗಳನ್ನು ರಕ್ಷಿಸುವ ಮತ್ತು ಇತ್ತೀಚಿನ ಕ್ರಿಮಿನಲ್ ಹಿಂಸಾಚಾರವನ್ನು ಎದುರಿಸುವ ಅತ್ಯಂತ ಬಲವಾದ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕುವ ಭಾಗ್ಯವನ್ನು ನಾನು ಹೊಂದಿದ್ದೇನೆ. ದೇಶದ ವಿರುದ್ಧದ ಈ ಕಾನೂನುಬಾಹಿರ ಕೃತ್ಯಗಳಿಗೆ ದೀರ್ಘ ಜೈಲು ಶಿಕ್ಷೆ ಪಕ್ಕಾ’’ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.