ವಾಷಿಂಗ್ಟನ್: ಪೊಲೀಸ್ ವ್ಯವಸ್ಥೆ ಸುಧಾರಣೆಯ ಕುರಿತು ಕಾರ್ಯಕಾರಿ ಆದೇಶಕ್ಕೆ ಸಹಿ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಫ್ಲಾಯ್ಡ್ ಮರಣದ ಬಳಿಕ ಅಮೆರಿಕದಲ್ಲಿ ಪೊಲೀಸ್ ವ್ಯವಸ್ಥೆ ಸುಧಾರಣೆಗೆ ಕ್ರಮ - ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಮರಣದ ಬಳಿಕ ಪೊಲೀಸ್ ನೀತಿಗಳಲ್ಲಿ ಬದಲಾವಣೆಯಾಗಬೇಕು ಎಂಬ ಕೂಗು ಅಮೆರಿಕದಾದ್ಯಂತ ಕೇಳಿಬರುತ್ತಿದೆ. ಹೀಗಾಗಿ ಪೊಲೀಸ್ ಸುಧಾರಣೆಯ ಕುರಿತ ಕಾರ್ಯಕಾರಿ ಆದೇಶಕ್ಕೆ ಅಮೆರಿಕಾಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಲಿದ್ದಾರೆ.
trump
ದೇಶದಲ್ಲಿ ಉತ್ತಮ ಕಾನೂನು ಮತ್ತು ಸುವ್ಯವಸ್ಥೆಯನ್ನು ನಾನು ಬಯಸುತ್ತೇನೆ. ಈ ಆದೇಶ ನ್ಯಾಯಸಮ್ಮತವಾಗಿ ಇರಲಿದೆ ಎಂದು ಅವರು ಹೇಳಿದ್ದಾರೆ.
ಜಾರ್ಜ್ ಫ್ಲಾಯ್ಡ್ ಮರಣದ ಬಳಿಕ ಪೋಲಿಸ್ ನೀತಿಗಳಲ್ಲಿ ಬದಲಾವಣೆಯಾಗಬೇಕು ಎಂಬ ಕೂಗು ದೊಡ್ಡಣ್ಣನ ನಾಡಿನಲ್ಲಿ ಜೋರಾಗಿ ಕೇಳಿಬಂದಿತ್ತು.