ಕರ್ನಾಟಕ

karnataka

ಗುರುತಿನ ಚೀಟಿ ಪರಿಕಲ್ಪನೆಯೇ ಪಾರದರ್ಶಕ ಮತದಾನಕ್ಕೆ ಮುಖ್ಯ: ಟ್ರಂಪ್​ ಪ್ರತಿಪಾದನೆ

By

Published : Apr 4, 2020, 1:43 PM IST

ಸದ್ಯ ಅಮೆರಿಕದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆಗಾಗಿ ಮತಗಟ್ಟೆಗಾಗಿ ಹೋಗುವುದು ಕಷ್ಟ ಹಾಗೂ ಅಪಾಯಕಾರಿ ಅನ್ನುವುದು ಜನರ ನಡುವಿನ ಚರ್ಚೆ.

Trump
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಇದೇ ನವೆಂಬರ್​ನಲ್ಲಿ ನಡೆಯಲಿರುವ ಯುಎಸ್ ಸಾರ್ವತ್ರಿಕ ಚುನಾವಣೆ ಮೇಲ್-ಇನ್ ಮತದಾನದ ವಿಚಾರವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರವಾಗಿ ವಿರೋಧಿಸಿದ್ದಾರೆ. ಬದಲಾಗಿ, ಮತದಾರರ ಗುರುತಿನ ಚೀಟಿ ಪರಿಕಲ್ಪನೆಯನ್ನು ಬಲವಾಗಿ ಪ್ರತಿಪಾದಿಸಿದ್ದಾರೆ.

ನವೆಂಬರ್‌ನಲ್ಲಿ ನಡೆಯಲಿರುವ ಯುಎಸ್ ಸಾರ್ವತ್ರಿಕ ಚುನಾವಣೆ ಕೊರೊನಾ ವೈರಸ್​ನಿಂದಾಗಿ ವಿಳಂಬವಾಗುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ ಟ್ರಂಪ್​, ಮತದಾನಕ್ಕೆ ಗುರುತಿನ ಚೀಟಿ ಪರಿಕಲ್ಪನೆಯೇ ಸರಿಯಾದ ಕ್ರಮ ಎಂದು ಹೇಳಿದ್ದಾರೆ.

ಸದ್ಯ ಅಮೆರಿಕಾದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ, ಈ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆಗಾಗಿ ಮತಗಟ್ಟೆಗಾಗಿ ಹೋಗುವುದು ಕಷ್ಟ ಹಾಗೂ ಅಪಾಯಕಾರಿ ಅನ್ನುವುದು ಜನರ ನಡುವಿನ ಚರ್ಚೆ. ಹೀಗಾಗಿ ಮನೆಯಲ್ಲೇ ಇದ್ದು ಮೇಲ್-ಇನ್ ವೋಟಿಂಗ್​ ನಡೆಸುವ ಬಗ್ಗೆ ದೇಶದಲ್ಲಿ ಮಾತುಕತೆ ನಡೆಯುತ್ತಿದೆ. ಆದರೆ ವೈರಸ್​ ಭೀತಿಯ ನಡುವೆಯೂ ಚುನಾವಣೆ ನಡೆದೇ ನಡೆಯುತ್ತದೆ ಎಂದು ಟ್ರಂಪ್​ ವಿಶ್ವಾಸದಲ್ಲಿದ್ದಾರೆ. ಅಲ್ಲದೆ ಮತದಾನ ಪ್ರಕ್ರಿಯೆ ಮತಗಟ್ಟೆಗಳಲ್ಲೇ, ಗುರುತಿನ ಆಧಾರದಲ್ಲೇ ನಡೆಯುವುದು ಸರಿಯಾದ ಕ್ರಮ ಎಂದು ಟ್ರಂಪ್​ ಪ್ರತಿಪಾದಿಸಿದ್ದಾರೆ.

ಮೇಲ್-ಇನ್ ಮತದಾನದಿಂದ ಬಹಳಷ್ಟು ಜನರು ಮೋಸ ಮಾಡುತ್ತಾರೆ ಎಂದು ಶುಕ್ರವಾರ ಶ್ವೇತಭವನದಲ್ಲಿ ನಡೆದ ಕೊರೊನಾ ವೈರಸ್ ಕಾರ್ಯಪಡೆ ಸಭೆಯಲ್ಲಿ ಟ್ರಂಪ್ ಹೇಳಿದ್ದಾರೆ. ಜನರು ಮತದಾರರ ಗುರುತಿನ ಚೀಟಿಯೊಂದಿಗೆ ಮತ ಚಲಾಯಿಸಬೇಕು. ಮತದಾರರ ಗುರುತಿನ ಚೀಟಿ ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. ಮತದಾನಕ್ಕೆ ಗುರುತನ್ನು ಬಯಸುವುದಿಲ್ಲವೆಂದರೆ ಅವರು ಮೋಸ ಮಾಡುವ ಪ್ರವೃತ್ತಿಯಿದೆ ಎಂದರ್ಥ ಎಂದು ಟ್ರಂಪ್​ ಹೇಳಿದ್ದಾರೆ.

ಭಾರತ, ಅರ್ಜೆಂಟೀನಾ, ಆಸ್ಟ್ರೇಲಿಯಾ ಮತ್ತು ಬ್ರೆಜಿಲ್ ಸೇರಿದಂತೆ ಹಲವಾರು ದೇಶಗಳಲ್ಲಿ ಮತದಾರರ ಗುರುತಿನ ಚೀಟಿ ಚುನಾವಣಾ ಪ್ರಕ್ರಿಯೆಯ ಪ್ರಮುಖ ಭಾಗವಾಗಿದ್ದು, ಮತದಾರರನ್ನು ಗುರುತಿಸಲು ಸರ್ಕಾರ ಫೋಟೋ ಗುರುತಿನ ಚೀಟಿಗಳನ್ನು ನೀಡುತ್ತದೆ.

ABOUT THE AUTHOR

...view details