ವಾಷಿಂಗ್ಟನ್: ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ವರದಿಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಳ್ಳಿಹಾಕಿದ್ದಾರೆ.
"ವರದಿ ತಪ್ಪಾಗಿದೆ ಎಂದು ನಾನು ಭಾವಿಸುತ್ತೇನೆ" ಎಂದು ಟ್ರಂಪ್ ಸಿಎನ್ಎನ್ ವರದಿಯನ್ನು ಟೀಕಿಸಿದ್ದಾರೆ.

"ಅವರು ಹಳೆಯ ದಾಖಲೆಗಳನ್ನು ಬಳಸಿದ್ದಾರೆಂದು ಕೇಳಿಬಂದಿದೆ. ಇದು ನಕಲಿ ವರದಿ ಎಂದು ನಾನು ಭಾವಿಸುತ್ತೇನೆ" ಎಂದು ಟ್ರಂಪ್ ಹೇಳಿದ್ದಾರೆ.
ಕಿಮ್ ಜಾಂಗ್ ಉನ್ ಆರೋಗ್ಯ ಗಂಭೀರ ಸ್ಥಿತಿಯಲ್ಲಿದೆ. ಅತಿಯಾದ ಧೂಮಪಾನ, ಬೊಜ್ಜು ಮತ್ತು ಆಯಾಸದಿಂದ ತೀವ್ರ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಿಎನ್ಎನ್ ವರಿದಿ ಮಾಡಿತ್ತು.
ಈ ವರದಿಯನ್ನು ತಳ್ಳಿಹಾಕಿದ ಟ್ರಂಪ್, ಕಿಮ್ಗೆ ಶುಭ ಹಾರೈಸಿದರು. "ನಾವು ಉತ್ತರ ಕೊರಿಯಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇವೆ" ಎಂದು ಹೇಳಿದರು.