ವಾಷಿಂಗ್ಟನ್(ಅಮೆರಿಕ): ತಾಲಿಬಾನ್ನೊಂದಿಗಿನ ಶಾಂತಿ ಒಪ್ಪಂದಕ್ಕೆ ಅಮೆರಿಕ ಬಹಳ ಸಮೀಪವಿದೆಯೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ.
ತಾಲಿಬಾನ್ನೊಂದಿಗೆ ಶಾಂತಿ ಒಪ್ಪಂದಕ್ಕೆ ಮುಂದಾದ ಟ್ರಂಪ್! - Trump
ಅಮೆರಿಕ-ತಾಲಿಬಾನ್ ಶಾಂತಿ ಒಪ್ಪಂದಕ್ಕೆ ಕೆಲ ದಿನಗಳಷ್ಟೇ ಬಾಕಿಯಿದ್ದು, ತಾಲಿಬಾನ್ನೊಂದಿಗಿನ ಶಾಂತಿ ಒಪ್ಪಂದಕ್ಕೆ ಅಮೆರಿಕ ಬಹಳ ಸಮೀಪವಿದೆ ಎಂದು ಜೆರಾಲ್ಡೊ ರಿವೆರಾ ಅವರ "ರೋಡ್ಕಿಲ್" ರೇಡಿಯೊ ಕಾರ್ಯಕ್ರಮವೊಂದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ.
ನಾವು ತಾಲಿಬಾನ್ನೊಂದಿಗಿನ ಶಾಂತಿ ಒಪ್ಪಂದಕ್ಕೆ ಬಹಳ ಸಮೀಪದಲ್ಲಿದ್ದೇವೆ : ಟ್ರಂಪ್ ಸ್ಪಷ್ಟನೆ!
ನಾವು ಬಹಳ ಸನಿಹದಲ್ಲಿದ್ದೇವೆಂದು ಭಾವಿಸುತ್ತೇನೆ, ಶಾಂತಿ ಒಪ್ಪಂದ ಮಾಡಿಕೊಳ್ಳಲು ಉತ್ತಮ ಅವಕಾಶವಿದೆ ಎಂದು ಜೆರಾಲ್ಡೊ ರಿವೆರಾ ಅವರ "ರೋಡ್ಕಿಲ್" ರೇಡಿಯೊ ಕಾರ್ಯಕ್ರಮವೊಂದರಲ್ಲಿ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಅಲ್ಲದೆ ಮುಂಬರುವ ಎರಡು ವಾರಗಳಲ್ಲಿ ಎಲ್ಲವೂ ತಿಳಿಯಲಿದೆಯೆಂದು ಸ್ಪಷ್ಟಪಡಿಸಿದ್ದಾರೆ.
ಶಾಂತಿಯುತ ವಾತಾವರಣಕ್ಕೆ ದೇಶಗಳ ನಡುವಿನ ಈ ಶಾಂತಿ ಒಪ್ಪಂದಗಳು ಬಹಳ ಅಗತ್ಯ ಮತ್ತು ಪ್ರಮುಖ ಪಾತ್ರ ವಹಿಸುತ್ತವೆ. ಹಾಗೆಯೇ ಅಮೆರಿಕ ಮತ್ತು ತಾಲಿಬಾನ್ ನಡುವಿನ ಶಾಂತಿ ಒಪ್ಪಂದವು ಪ್ರಮುಖವಾಗಿದ್ದು, ಬರುವ ಶಾಂತಿಯುತ ದಿನಗಳಿಗೆ ಅಮೆರಿಕ ಕಾಯುತ್ತಿದೆ.