ವಾಷಿಂಗ್ಟನ್: ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೊರೊನಾ ವೈರಸ್ ಮರು ಪರೀಕ್ಷೆಗೆ ಒಳಗಾಗಿದ್ದಾರೆ. ಸದ್ಯ ಕೊರೊನಾ ಸೋಂಕಿನಿಂದ ಅವರು ಚೇತರಿಸಿಕೊಂಡಿದ್ದಾರೆ.
ಕೊರೊನಾದಿಂದ ಗುಣಮುಖ: ಪ್ಲಾಸ್ಮಾ ದಾನಕ್ಕೆ ಸಿದ್ಧನೆಂದ ಅಮೆರಿಕ ಅಧ್ಯಕ್ಷ - ಕೊರೊನಾದಿಂದ ಗುಣಮುಖರಾದ ಟ್ರಂಪ್
ಕೊರೊನಾದಿಂದ ಗುಣಮುಖರಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಾವು ಇತರ ಸೋಂಕಿತರಿಗೆ ಪ್ಲಾಸ್ಮಾ ದಾನ ಮಾಡುವುದಾಗಿ ತಿಳಿಸಿದ್ದಾರೆ.
ಕೊರೊನಾದಿಂದ ಗುಣಮುಖರಾದ ಟ್ರಂಪ್
ಫಾಕ್ಸ್ ನ್ಯೂಸ್ ಜತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು, ಕೊರೊನಾ ವೈರಸ್ ತಗುಲಿದ ಬಳಿಕ ಪ್ರತಿ 2 ದಿನಗಳಿಗೊಮ್ಮೆ ನನ್ನನ್ನು ಪರೀಕ್ಷಿಸಲಾಗಿದೆ. ಸದ್ಯ ಕೊಂಚ ಮಟ್ಟಿಗೆ ಗುಣಮುಖನಾಗಿದ್ದೇನೆ ಎಂದು ಹೇಳಿದ್ದಾರೆ.
ಕಳೆದ ವಾರಾಂತ್ಯದಲ್ಲಿ ಆಸ್ಪತ್ರೆಗೆ ದಾಖಲಾದ ನಂತರ ತಮ್ಮ ಮೊದಲ ಟೆಲಿವಿಷನ್ ಸಂದರ್ಶನದಲ್ಲಿ, ಟ್ರಂಪ್ ತಾವು 'ತುಂಬಾ ಬಲಶಾಲಿ' ಎಂದು ಭಾವಿಸುತ್ತಾರೆ. ಶುಕ್ರವಾರದಿಂದ ಕೊರೊನಾಗಾಗಿ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುತ್ತಿಲ್ಲ. ಕೊರೊನಾ ವೈರಸ್ಗೆ ತುತ್ತಾಗುವ ಇತರರಿಗೆ ಸಹಾಯ ಮಾಡಲು ಪ್ಲಾಸ್ಮಾ ದಾನ ಮಾಡಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ.
Last Updated : Oct 10, 2020, 12:10 PM IST