ಕರ್ನಾಟಕ

karnataka

ETV Bharat / international

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಮೊದಲ ಚರ್ಚೆಯ ಗೆಲುವು ನನ್ನದೇ ಎಂದ ಟ್ರಂಪ್​ - US Election 2020

ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ವಿರುದ್ಧ ಮಂಗಳವಾರ ರಾತ್ರಿ ನಡೆದ ಅಧ್ಯಕ್ಷೀಯ ಚುನಾವಣೆಯ ಮೊದಲ ಚರ್ಚೆಯಲ್ಲಿ ಜಯ ಗಳಿಸಿರುವುದಾಗಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಹೇಳಿಕೆ ನೀಡಿದ್ದಾರೆ.

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್

By

Published : Oct 1, 2020, 10:43 AM IST

ವಾಷಿಂಗ್ಟನ್:ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಎದುರಾಳಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ವಿರುದ್ಧ ಮಂಗಳವಾರ ರಾತ್ರಿ ನಡೆದ ಅಧ್ಯಕ್ಷೀಯ ಚುನಾವಣೆಯ ಮೊದಲ ಚರ್ಚೆಯಲ್ಲಿ ಜಯ ಗಳಿಸಿರುವುದಾಗಿ ಹೇಳಿದ್ದಾರೆ.

ಈ ಕುರಿತು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್​, "ನಾವು ಕಳೆದ ರಾತ್ರಿಯ ಚರ್ಚೆಯನ್ನು ಸುಲಭವಾಗಿ ಗೆದ್ದಿದ್ದೇವೆ. ಬಿಡೆನ್ ತುಂಬಾ ದುರ್ಬಲನಾಗಿದ್ದಾನೆಂದು ನಾನು ಭಾವಿಸುತ್ತೇನೆ. ಪ್ರತಿಯೊಂದು ಸಮೀಕ್ಷೆಯ ಮೂಲಕ ನಾವು ಚರ್ಚೆಯನ್ನು ಗೆದ್ದಿದ್ದೇವೆ" ಎಂದಿದ್ದಾರೆ.

ಓಹಿಯೋದ ಕ್ಲೇವ್​ಲ್ಯಾಂಡ್​ನಲ್ಲಿ ನಡೆದ ಮೂರು ಅಧ್ಯಕ್ಷೀಯ ಚರ್ಚೆಗಳಲ್ಲಿ ಮೊದಲ ಚರ್ಚೆ ಗೆದ್ದಿರುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ವರದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು,"ಫ್ಲೋರಿಡಾ ಮತ್ತು ಟೆನ್ನೆಸೀಯಲ್ಲಿ ನಡೆಯಲಿರುವ ಎರಡು ಅಧ್ಯಕ್ಷೀಯ ಚುನಾವಣಾ ಚರ್ಚೆಯಲ್ಲಿ ಪಾಲ್ಗೊಳ್ಳಲು ಎದುರು ನೋಡುತ್ತಿದ್ದೇನೆ, ಬಿಡೆನ್​ ಜೊತೆ ಸಂವಾದ ಮಾಡಲು ನನಗೇನು ಭಯವಿಲ್ಲ. ಆತ ಚರ್ಚೆಯನ್ನು ತ್ಯಜಿಸಲು ಬಯಸುತ್ತಿದ್ದಾನೆ ಎಂದು ಕೇಳಲ್ಪಟ್ಟಿದ್ದೇನೆ" ಎಂದರು.

ABOUT THE AUTHOR

...view details